Thursday, February 6, 2025
No menu items!

RurbanIndia

ಗೋಟಾಲ..ಗೋಟಾಲ..ನದಿ ಬನಾಯಾ ನಾಲಾ

ನದಿ ಬನಾಯಾ ನಾಲಾ, ಕಿಸ್ನೆ ಕಿಯಾ ಗೋಟಾಲ, ಗೋಟಾಲ ಗೋಟಾಲ..ಸಿನಿಮಾ ಉತ್ಸಾಹಿ ನ ನಿತಿನ್‌ ದಾಸ್‌ ರೂಪಿಸಿರುವ 2.37 ನಿಮಿಷಗಳ ಹಾಡು 'ಗೋಟಾಲ..ಗೋಟಾಲ..ನದಿ ಬನಾಯಾ ನಾಲಾ' ಪುಣೆಯ ನದಿಗಳ ದುರಂತ ಕಥೆಯನ್ನು ಹೇಳುತ್ತದೆ. ದುರಂತಗಾಥೆಯನ್ನು ಅತ್ಯುತ್ತಮ ಸಂಗೀತ ಹಾಗೂ ಮಾಹಿತಿಯೊಂದಿಗೆ ನಾಗರಿಕರಿಗೆ ಮುಟ್ಟಿಸಲು ಪ್ರಯತ್ನಿಸಿದ್ದಾರೆ ನಿತಿನ್.‌ ಈ ನದಿಯ ಹಾಡನ್ನು ನೋಡಿ ನಮ್ಮ ನದಿಯನ್ನು...

ನೀವೂ ಗ್ರಾಮೀಣ ಪಡೆಯ ಸದಸ್ಯರಾಗಿ

ಭಾರತ ಇರುವುದು ಹಳ್ಳಿಗಳಲ್ಲಿ ಎಂಬ ಮಾತು ಕೊಂಚ ಹಳೆಯದು. ಈಗ ಆ ಹಳ್ಳಿಗಳೇ ನವರೂಪದಲ್ಲಿ ಅರೆಪಟ್ಟಣಗಳಾಗಿ ರೂಪುಗೊಳ್ಳುತ್ತಿವೆ. ಇಂತಹ ಅರೆಪಟ್ಟಣಗಳ ಆರೋಗ್ಯವನ್ನು ಕಾಪಾಡುವುದು ಬಹಳ ಮುಖ್ಯವಾದುದು. ಅದರಲ್ಲೂ ಭಾರತದ ಮಹಾನಗರಗಳ ಆರೋಗ್ಯದಲ್ಲಿ ಏರುಪೇರು ಆಗಬಾರದೆಂದರೆ ಈ ಅರೆ ಪಟ್ಟಣಗಳು, ಹಳ್ಳಿಗಳ ಆರೋಗ್ಯ ಸುಸ್ಥಿರವಾಗಿರಬೇಕು. ಈ ಮಹಾ ಪಯಣದಲ್ಲಿ ಗ್ರಾಮೀಣ ಪತ್ರಕರ್ತರು, ನಾಗರಿಕರು, ವಿದ್ಯಾವಂತ ಉತ್ಸಾಹಿಗಳು,...

ದೇವರ ನಾಡಿನಲ್ಲಿ ಇತ್ತೀಚೆಗೆ ಬರವೇ ಕಾಯಂ ಅತಿಥಿ !

ಇಡುಕ್ಕಿ: ಕೇರಳದ ಇಡುಕ್ಕಿ ಜಿಲ್ಲೆ ತಿಳಿದಿರಬಹುದು. ನೆನಪು ಮಾಡಿಕೊಳ್ಳಿ. ನಾಲ್ಕು ವರ್ಷದ ಹಿಂದೆ ಬಿದ್ದ ದಿಢೀರ್‌ ಮಳೆಗೆ ಊರಿಗೇ ಊರೇ ಕೊಚ್ಚಿ ಹೋಗಿತ್ತು. ಒಮ್ಮೆಲೆ ಶುರುವಾದ ಮಳೆ ಅಬ್ಬರಿಸತೊಡಗಿದಾಗ ಇದೂ ಎಂದಿನ ಮಳೆ ಅಂದುಕೊಂಡಿದ್ದರು. ಆದರೆ ಕೆಲವೇ ಕ್ಷಣಗಳಲ್ಲಿ ಅದು ಸುಳ್ಳೆನಿಸಿ ಸೇತುವೆ, ಮನೆ ಮಾರು ಎಲ್ಲವೂ ಕುಸಿಯತೊಡಗಿದಾಗ ಪ್ರಳಯದ ಅನುಭವವಾಗಿತ್ತು. ವಿಚಿತ್ರವೆಂದರೆ ಅದೇ ಜಿಲ್ಲೆಯಲ್ಲಿಈ...

ಅಮರಾವತಿ ಯೋಜಿಸಿದಂತೆ ರೂಪುಗೊಂಡರೆ ಮಾದರಿ ನಗರ

ಇಂದ್ರನ ಅಮರಾವತಿ ಬಗ್ಗೆ ಕೇಳಿದ್ದೆವು. ಇದು ಚಂದ್ರನ ಅಮರಾವತಿ ಬಗ್ಗೆ. ಅಂದರೆ ತೆಲುಗು ದೇಶಂನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಅಮರಾವತಿ. ಆಂಧ್ರ ಪ್ರದೇಶದ ಕನಸಿನ ರಾಜಧಾನಿ. ಅಮರಾವತಿ ಇಂದ್ರನ ರಾಜಧಾನಿಗಿಂತ ಚೆನ್ನಾಗಿ ಆಗಬಹುದೇ? ಇಂಥದೊಂದು ಪ್ರಶ್ನೆ ಉದ್ಭವಿಸಿತ್ತು. ಚಂದ್ರಬಾಬು ನಾಯ್ಡು ಕನಸಿದು. ಮುಖ್ಯಮಂತ್ರಿಯಾಗಿದ್ದಾಗ ನಗರ ನಿರ್ಮಾಣಕ್ಕೆ ಚಾಲನೆ ಕೊಟ್ಟರು. ಆದರೆ ನಂತರದ ಚುನಾವಣೆಯಲ್ಲಿ...

ಕೊಡಗು ಮರುಗುತ್ತಿದೆ; ಕಾವೇರಿ ಸೊರಗುತ್ತಿದ್ದಾಳೆ !

ನಗರಗಳಿಗೆ ಜೀವಜಲವಾದ ನದಿಗಳ ಮೂಲವೇ ನೀರಿನ ಕೊರತೆಯನ್ನು ಅನುಭವಿಸಲು ಆರಂಭಿಸದರೆ ಇದಕ್ಕೆ ಏನೆನ್ನಬೇಕು? ನಮ್ಮ ನಗರೀಕರಣದ ಹಪಹಪಿಸುವಿಕೆ ಇದಕ್ಕೆ ಕಾರಣವೆನ್ನಬೇಕೇ ಅಥವಾ ಲಭ್ಯ ನೀರನ್ನು ಸಂಪನ್ಮೂಲವನ್ನಾಗಿ ತಿಳಿಯದೇ ಅಂಧಾದುಂಧಿ ಮಾಡಿದುದರ ಪರಿಣಾಮವೇ? ನಮ್ಮ ನಿರ್ಲಕ್ಷ್ಯವೇ, ಅಸಡ್ಡೆಯೇ? ಎಂದು ವಿಶ್ಲೇಷಿಸಿದ್ದಾರೆ ಶ್ಯಾಮಸುಂದರ್.‌ ಕೊಡಗು ಮರುಗುತ್ತಿದೆ; ಕಾಫಿ ಕರಟುತ್ತಿದೆ ; ಕಾವೇರಿ ಸೊರಗುತ್ತಿದ್ದಾಳೆ ! ಒಂದೇ ಸಾಲಿನಲ್ಲಿ ಸರಳವಾಗಿ...

ಬರೀ ಮಾತಿನಲ್ಲೇ ಮುಕ್ಕಾಲು ಆಯುಷ್ಯ ಕಳೆದಿದ್ದೇವೆ !

ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಲಪಡಿಸದೇ ನಾವೆಷ್ಟೇ ತಿಪ್ಪರಲಾಗ ಹಾಕಿದರೂ ನಗರೀಕರಣದಲ್ಲಿನ ಅವ್ಯವಸ್ಥೆಯನ್ನು ಸರಿದಾರಿಗೆ ತರಲಾಗದು. ಈ ಅವ್ಯವಸ್ಥೆಯ ನಗರೀಕರಣದಿಂದ ಸೃಷ್ಟಿಯಾಗುವ ಇಬ್ಬರು ರಾಕ್ಷಸರೆಂದರೆ  ವಾಹನ ದಟ್ಟಣೆ ಮತ್ತು ತ್ಯಾಜ್ಯ ವಿಲೇವಾರಿ. ಇವರಿಬ್ಬರ ಸಂಹಾರಕ್ಕೆ ಬರೀ ಸರಕಾರದಿಂದಲೋ, ಆಡಳಿತದಿಂದಲೋ ಸಾಧ್ಯವಾಗದು. ಸಾರ್ವಜನಿಕರ ಸಹಕಾರ ಅವಶ್ಯ. ಅಂಥದೊಂದು ಪರಸ್ಪರ ನಂಬಿಕೆಯ ವ್ಯವಸ್ಥೆ  ಮೊದಲು ನಿರ್ಮಾಣವಾಗಬೇಕು. ಇಂದು ನಗರಗಳಲ್ಲಿ ಕಾಡುತ್ತಿರುವುದೇ...

ಹೌಸ್‌ ಫುಲ್…ಮಹಾನಗರಗಳು ಭರ್ತಿಯಾಗಿವೆ !

ಖಂಡಿತಾ ಇದರಲ್ಲಿ ಅನುಮಾನವೇ ಇಲ್ಲ, ಅನುಮಾನ ಪಡುವುದೂ ಬೇಕಿಲ್ಲ. ದಿನೇ ದಿನೆ ನಗರಗಳ ಸ್ಫೋಟವನ್ನು ಗಮನಿಸಿದರೆ ಭಯವಾಗುವುದೂ ಉಂಟು, ಆತಂಕವಾಗುವುದೂ ಉಂಟು. ಕೈಗಾರೀಕರಣದ ಕಲ್ಪನೆಯಲ್ಲಿ ಈ ಕೇಂದ್ರೀಕೃತ ವ್ಯವಸ್ಥೆಯ ನಗರಗಳನ್ನು ಸೃಷ್ಟಿಸಿಕೊಳ್ಳುತ್ತಾ ಹೊರಟೆವು. ಹತ್ತು ಪಟ್ಟಣ ಸೇರಿ ಒಂದು ದೊಡ್ಡ ಪಟ್ಟಣವಾಯಿತು. ಕ್ರಮೇಣ ಅಂಥ ಹತ್ತು ದೊಡ್ಡ ಪಟ್ಟಣ ಸೇರಿ ಒಂದು ನಗರವಾಯಿತು. ಆ...

ನದಿಗಳನ್ನು ಮಲಿನಗೊಳಿಸುವ ಚಟ

ನದಿಗಳ ಅಗತ್ಯವೇ ನಮಗಿನ್ನೂ ಅರ್ಥವಾಗಿಲ್ಲ. ಐದು ವರ್ಷಗಳಲ್ಲಿ ಈ ಮಾಲಿನ್ಯಗೊಳಿಸುವ ನಮ್ಮ ಚಟ ದುಪ್ಪಟ್ಟು ಬೆಳೆದಿದೆ ಎಂದರೆ ನಂಬಲೇಬೇಕು. * ನಮ್ಮ ದೇಶದಲ್ಲಿ ಯಾವ ನದಿ ಇನ್ನೂ ಪವಿತ್ರವಾಗಿರಬಹುದು? ಮಲಿನಗೊಳ್ಳದಿರಬಹುದು? ಎಂದು ಅಧ್ಯಯನ ಮಾಡ ಹೊರಟರೆ ನಮಗೆ ಸಿಗುವುದು ಶೂನ್ಯವೇ ಹೊರತು ಮತ್ತೇನೂ ಅಲ್ಲ. ಅನಿಯಂತ್ರಿತ ನಗರೀಕರಣ ಸೃಷ್ಟಿಸುತ್ತಿರುವ ಸಮಸ್ಯೆಗಳು ಬೇರೆ ಎಂದು ಕೆಲವೊಮ್ಮೆ ಯೋಚಿಸಬಹುದು. ಆದರೆ,...

ಮತ್ತಷ್ಟು ಅಡ್ಡರಸ್ತೆಗಳನ್ನು ಸೃಷ್ಟಿಸಿಕೊಳ್ಳುತ್ತಾ…

ಬೆಳಕಿಗೆ ಭಾವವಿದೆ ಎಂದಾದರೆ, ಕತ್ತಲೆಗೆ ಜೀವವಿದೆ ಎಂದೆನಿಸುವುದು ನಗರಗಳಲ್ಲಿನ ಕಣ್ಣು ಕೋರೈಸುವ ನಿಯಾನ್‌ ಬೆಳಕಿನಲ್ಲಿ ಮುಳುಗಿದಾಗ. ಅಡ್ಡರಸ್ತೆಯ ಜಮಾನದಲ್ಲಿ ಕಳೆದು ಹೋಗುವ ಮೊದಲು ಕತ್ತಲೆಯನ್ನು ಪ್ರೀತಿಸುವುದನ್ನು ಕಳೆಯಬೇಕು. ದೂರದೊಂದು ತೀರದಿಂದ ತೇಲಿ ಪಾರಿಜಾತ ಗಂಧಕೆ ಮನಸೋತು ಹೊರಟವರು ವಾಪಸು ಹೊರಡಬೇಕಿದೆ.  * ನಗರಗಳೆಂದರೆ ಕಣ್ಣು ಕೋರೈಸುವ ಬೆಳಕಿದ್ವಂತೆ. ಕತ್ತಲೆಯಲ್ಲಿ ಬದುಕುವುದು ಕಷ್ಟವೆಂದು ಬೆಳಕಿಗೆ ಬರಬಹುದು. ಅದು ಒಂದು...

ಉದ್ಯೋಗವೆಂಬುದು ಉದ್ಯಮವಾದದ್ದೇ ಸಮಸ್ಯೆಯೇ?

ಮಾನವ ಸಂಬಂಧಗಳ ನಿರ್ವಹಣೆಗೂ ತ್ಯಾಜ್ಯ ನಿರ್ಮಾಣ ಅಭ್ಯಾಸಕ್ಕೂ ಒಂದು ಸಂಬಂಧವಿದೆ. ಅದರ ನಾಡಿ ಹಿಡಿದು ನಡೆದರೆ ಬಹುಶಃ ಹೊಟೇಲ್‌ ಗಳಲ್ಲೇನು, ನಗರಗಳಲ್ಲೂ ತ್ಯಾಜ್ಯ ಸೃಷ್ಟಿಗೆ ಕೊನೆ ಹೇಳಬಹುದೇನೋ? * ಉದ್ಯಮಕ್ಕೂ ಉದ್ಯೋಗಕ್ಕೂ ಇರುವ ವ್ಯತ್ಯಾಸ ಬಹಳ ಸೂಕ್ಷ್ಮದ್ದು. ಆದರೆ ತೀರಾ ಗಹನವಾದದ್ದು. ಪಾಶ್ಚಾತ್ಯ ಜಗತ್ತಿನ ಕನ್ಸೂಮರಿಸಂನ್ನು ದೃಷ್ಟಿಯಲ್ಲಿಟ್ಟುಕೊಂಡು ಇದನ್ನು ವಿಶ್ಲೇಷಿಸಿದರೆ ಸಿಗುವ ಅರ್ಥಗಳೇ ಬೇರೆ. ಇದೇ ನೆಲೆ...

About Me

RurbanIndia is a space to redesign, revalue and rejuvenate our Rurban Development. A comprehensive strategy and think tank towards our Rurbansphere. RurbanIndia is a webspace of EkaAneka Media.
31 POSTS
0 COMMENTS
- Advertisement -spot_img

Latest News

ಈರುಳ್ಳಿ ಕಣ್ಣೀರು ತರಿಸಲಿಲ್ಲ; ದರ ಕಣ್ಣೀರು ಬರಿಸಿತು !

ಮುಂಬಯಿ: ಯಾಕೋ ಈರುಳ್ಳಿ ಬೆಳೆಗಾರರ ಕಷ್ಟ ಬಗೆಹರಿಯುವಂತೆ ಕಾಣುತ್ತಿಲ್ಲ. ಹಾಗಾಗಿ ಸಾಮಾನ್ಯವಾಗಿ ಗ್ರಾಹಕರು ಈರುಳ್ಳಿಯನ್ನುಕತ್ತರಿಸುವಾಗ ಪಡುವ ಸಂಕಟ-ಸಂಕಷ್ಟವನ್ನು ಬೆಳೆಗಾರರು ಅದನ್ನು ಮಾರುವಾಗ ಎದುರಿಸುತ್ತಿದ್ದಾರೆ. ಪ್ರತಿ ಬಾರಿ ಈರುಳ್ಳಿ...
- Advertisement -spot_img