ಭಾರತ ಇರುವುದು ಹಳ್ಳಿಗಳಲ್ಲಿ ಎಂಬ ಮಾತು ಕೊಂಚ ಹಳೆಯದು. ಈಗ ಆ ಹಳ್ಳಿಗಳೇ ನವರೂಪದಲ್ಲಿ ಅರೆಪಟ್ಟಣಗಳಾಗಿ ರೂಪುಗೊಳ್ಳುತ್ತಿವೆ. ಇಂತಹ ಅರೆಪಟ್ಟಣಗಳ ಆರೋಗ್ಯವನ್ನು ಕಾಪಾಡುವುದು ಬಹಳ ಮುಖ್ಯವಾದುದು. ಅದರಲ್ಲೂ ಭಾರತದ ಮಹಾನಗರಗಳ ಆರೋಗ್ಯದಲ್ಲಿ ಏರುಪೇರು ಆಗಬಾರದೆಂದರೆ ಈ ಅರೆ ಪಟ್ಟಣಗಳು, ಹಳ್ಳಿಗಳ ಆರೋಗ್ಯ ಸುಸ್ಥಿರವಾಗಿರಬೇಕು. ಈ ಮಹಾ ಪಯಣದಲ್ಲಿ ಗ್ರಾಮೀಣ ಪತ್ರಕರ್ತರು, ನಾಗರಿಕರು, ವಿದ್ಯಾವಂತ ಉತ್ಸಾಹಿಗಳು,...
ಮಾನವ ಸಂಬಂಧಗಳ ನಿರ್ವಹಣೆಗೂ ತ್ಯಾಜ್ಯ ನಿರ್ಮಾಣ ಅಭ್ಯಾಸಕ್ಕೂ ಒಂದು ಸಂಬಂಧವಿದೆ. ಅದರ ನಾಡಿ ಹಿಡಿದು ನಡೆದರೆ ಬಹುಶಃ ಹೊಟೇಲ್ ಗಳಲ್ಲೇನು, ನಗರಗಳಲ್ಲೂ ತ್ಯಾಜ್ಯ ಸೃಷ್ಟಿಗೆ ಕೊನೆ ಹೇಳಬಹುದೇನೋ?
*
ಉದ್ಯಮಕ್ಕೂ ಉದ್ಯೋಗಕ್ಕೂ ಇರುವ ವ್ಯತ್ಯಾಸ ಬಹಳ ಸೂಕ್ಷ್ಮದ್ದು. ಆದರೆ ತೀರಾ ಗಹನವಾದದ್ದು. ಪಾಶ್ಚಾತ್ಯ ಜಗತ್ತಿನ ಕನ್ಸೂಮರಿಸಂನ್ನು ದೃಷ್ಟಿಯಲ್ಲಿಟ್ಟುಕೊಂಡು ಇದನ್ನು ವಿಶ್ಲೇಷಿಸಿದರೆ ಸಿಗುವ ಅರ್ಥಗಳೇ ಬೇರೆ. ಇದೇ ನೆಲೆ...
ಬೆಳಕೆಂದರೆ ವಿದ್ಯುತ್ ಎನ್ನುವ ಕಾಲ ಸರಿದು ಹೋಗುತ್ತಿದೆ. ಬೆಳಕೆಂದರೆ ಸೂರ್ಯ ಎನ್ನುವ ಕಾಲ ಹತ್ತಿರವಾಗಿದೆ, ಹತ್ತಿರವಾಗುತ್ತಿದೆ. ಪ್ರತಿ ಹಂತದಲ್ಲೂ ಸೌರಶಕ್ತಿಯ ಪ್ರಭಾವ ಹೆಚ್ಚಾಗುತ್ತಿದೆ. ಇವೆಲ್ಲದರ ಮಧ್ಯೆ ಹತ್ತು ವರ್ಷಗಳ ಹಿಂದೆಯೇ ಸೂರ್ಯನನ್ನು ಕರೆಸಿ ಕುಳ್ಳಿರಿಸಿಕೊಂಡ ಹಳ್ಳಿಯ ಕಥೆ ಕೇಳಿ.
ಸೂರ್ಯ ಮೊದಲು ಬರುವುದು ಎಲ್ಲಿಗೆ ಅಂದರೆ ಹುಟ್ಟೋದು ಎಲ್ಲಿ ಎಂದು ಪ್ರಶ್ನೆ ಕೇಳಿದರೆ ಜಪಾನ್ ಎನ್ನಬಹುದು.
ಯಾಕೆಂದರೆ...
ಅರೆಪಟ್ಟಣಗಳು ಯಾಕೆ ಬೆಳೆಯಬೇಕು?
ಇಂಥದೊಂದು ಪ್ರಶ್ನೆಯನ್ನು ತಲೆಯಲ್ಲಿಟ್ಟುಕೊಂಡು ನಮ್ಮ ನಗರಗಳನ್ನು ಒಮ್ಮೆ ಸುತ್ತಿ ಬನ್ನಿ. ಆಗ ಎಲ್ಲ ಕಾರಣಗಳೂ ಸಿಗಬಹುದು.
ಬೆಂಗಳೂರನ್ನು ಒಮ್ಮೆ ಸುತ್ತಿ ಬರೋಣ. ಬರೀ ಅಂಕಿ ಅಂಶಗಳನ್ನು ಕಂಡು ಭಯಭೀತಗೊಳ್ಳುವುದು ಬೇಡ. ಅದಕ್ಕಿಂತ ಹೆಚ್ಚಾಗಿ ಬೆಂಗಳೂರಿನ ರಸ್ತೆಗಳಲ್ಲಿ ಒಮ್ಮೆ ನಡೆದಾಡಿದರೂ ಸರಿ ಅಥವಾ ರಿಕ್ಷಾ ಹಿಡಿದು ಸಂಚರಿಸಿದರೂ ಸರಿ.
ವಾರದ ದಿನಗಳಲ್ಲಿ ಅದರಲ್ಲೂ ಬೆಳಗ್ಗೆ 8...
ಮುಂಬಯಿ: ಯಾಕೋ ಈರುಳ್ಳಿ ಬೆಳೆಗಾರರ ಕಷ್ಟ ಬಗೆಹರಿಯುವಂತೆ ಕಾಣುತ್ತಿಲ್ಲ. ಹಾಗಾಗಿ ಸಾಮಾನ್ಯವಾಗಿ ಗ್ರಾಹಕರು ಈರುಳ್ಳಿಯನ್ನುಕತ್ತರಿಸುವಾಗ ಪಡುವ ಸಂಕಟ-ಸಂಕಷ್ಟವನ್ನು ಬೆಳೆಗಾರರು ಅದನ್ನು ಮಾರುವಾಗ ಎದುರಿಸುತ್ತಿದ್ದಾರೆ.
ಪ್ರತಿ ಬಾರಿ ಈರುಳ್ಳಿ...