ಎರಡು ದಿನಗಳಿಂದ ಮಳೆ ತೊಟ್ಟಿಕ್ಕತೊಡಗಿದೆ. ಕೆಲವು ಕಡೆ ತುಸು ಜೋರಾಗಿ, ಇನ್ನು ಕೆಲವೆಡೆ ತೊಟ್ಟಿಕ್ಕುವ ಮಾದರಿಯಲ್ಲಿ, ಇನ್ನೂ ಹಲವೆಡೆ ಬಂದು ಹೋದೆ ಎನ್ನುವುದಕ್ಕಷ್ಟೇ ಎನ್ನುವ ಹಾಗೆ ಮಳೆ ಬಂದಿದೆ. ಇದು ಮುಂಗಾರು ಪೂರ್ವ ಮಳೆ. ಹಾಗಾದರೆ ಮುಂಗಾರು ಚೆನ್ನಾಗಿರಬಹುದೆಂದು ರೈತರಾದಿಯಾಗಿ ಭಾವಿಸತೊಡಗಿದ್ದಾರೆ. ನಗರದ ಮಂದಿಯೂ ಮಳೆಯ ನೀರು ಚರಂಡಿಯಲ್ಲಿ ತುಂಬಿ ರಾಡಿ ಎಬ್ಬಿಸುವಾಗ ಬೈದುಕೊಳ್ಳಬಹುದು...
ಒಂದು ಸಂಶೋಧನೆ ಹೀಗೆ ಹೇಳುತ್ತದೆ.
ಜಾಗತಿಕ ತಾಪಮಾನ, ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ತಗ್ಗಿಸಬೇಕಾದರೆ ಅಥವಾ ಸಮರ್ಥವಾಗಿ ಎದುರಿಸಬೇಕಾದರೆ ಒಂದು ಪರಿಹಾರವಿದೆ. ಅದೆಂದರೆ, ಭತ್ತ ಬೆಳೆಯುವ ಬದಲು ಬೇರೆ...