Friday, January 24, 2025
No menu items!

ಪಟ್ಟಣ ಭಾರತ

ಏಷ್ಯಾದ ಶ್ರೀಮಂತ ಹಳ್ಳಿ ಗುಜರಾತಿನಲ್ಲಿದೆ, ಅಲ್ಲಿ ಎಲ್ಲವೂ ಇದೆ !

ಗುಜರಾತ್‌ ಮಾಡೆಲ್‌ ಎಂದು ಪ್ರಚಾರ ಮಾಡುತ್ತಿದ್ದವರು ಇನ್ನೊಮ್ಮೆ ಶರ್ಟ್‌ ನ ಕಾಲರ್‌ ನ್ನು ಮೇಲಕ್ಕೆ ಕೊಡವಬಹುದು. ಅದರಂತೆಯೇ ಗುಜರಾತ್‌ ಏನು ಮಹಾ ಎನ್ನುವವರು ಮತ್ತೊಮ್ಮೆ ಮೂಗು ಮುರಿಯಬಹುದು. ಇವೆಲ್ಲರ ಮಧ್ಯೆ ವಾಸ್ತವ ಏನೆಂದರೆ ಗುಜರಾತಿನ ಒಂದು ಸಣ್ಣ ಹಳ್ಳಿ ದೊಡ್ಡ ಸುದ್ದಿ ಮಾಡಿದೆ. ಈ ಸುದ್ದಿ ಮಾಡಿರುವುದು ಯಾವುದೋ ನೇತ್ಯಾತ್ಮಕ ಕಾರಣಕ್ಕಲ್ಲ, ಬದಲಾಗಿ ಧನಾತ್ಮಕ ಕಾರಣಕ್ಕೆ. ಶ್ರೀಮಂತಿಕೆ...

Rural Life: ನಾವು ರೈತರು, ನಮ್ಮ ಮಕ್ಕಳಿಗೂ ಹೆಣ್ಣು ಕೊಡಿ !

ರೈತರ ಮಕ್ಕಳಿಗೆ ಮದುವೆಯಾಗಲಿಕ್ಕೆ ಹೆಣ್ಣು ಸಿಗುತ್ತಿಲ್ಲ..ಯಾವ ಪೋಷಕರೂ ರೈತರ ಮಗನಿಗೆ ತಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡುವುದಿಲ್ಲವಂತೆ. ಈ ಸಮಸ್ಯೆ ಇನ್ನೂ ಹಲವು ಕ್ಷೇತ್ರದ ಉದ್ಯೋಗಿಗಳಿಗೆ ಎದುರಾಗಿದೆ. ಮುಖ್ಯವಾಗಿ ಸ್ವಯಂ ಉದ್ಯೋಗವೆಂದರೆ ಸ್ವಲ್ಪ ಹಿಂದೆಯೇ. ಬಹುತೇಕರ ಒಲವು ಐಟಿ ಕ್ಷೇತ್ರದವರ ಮೇಲೆ. ಅದರಲ್ಲೂ ಒಂದು ತಮಾಷೆ ಇದೆ. ಮೊದ ಮೊದಲು ಐಟಿ ಕ್ಷೇತ್ರದವರಾಗಿದ್ದರೆ ಪರವಾಗಿಲ್ಲ,...

water distress : ಜಲಸಂಪನ್ಮೂಲಗಳ ಕೊರತೆ: ಭವಿಷ್ಯದ ಸಂಕಷ್ಟಕ್ಕೆ ಬುನಾದಿ

ಎರಡು ದಿನಗಳಿಂದ ಮಳೆ ತೊಟ್ಟಿಕ್ಕತೊಡಗಿದೆ. ಕೆಲವು ಕಡೆ ತುಸು ಜೋರಾಗಿ, ಇನ್ನು ಕೆಲವೆಡೆ ತೊಟ್ಟಿಕ್ಕುವ ಮಾದರಿಯಲ್ಲಿ, ಇನ್ನೂ ಹಲವೆಡೆ ಬಂದು ಹೋದೆ ಎನ್ನುವುದಕ್ಕಷ್ಟೇ ಎನ್ನುವ ಹಾಗೆ ಮಳೆ ಬಂದಿದೆ. ಇದು ಮುಂಗಾರು ಪೂರ್ವ ಮಳೆ. ಹಾಗಾದರೆ ಮುಂಗಾರು ಚೆನ್ನಾಗಿರಬಹುದೆಂದು ರೈತರಾದಿಯಾಗಿ ಭಾವಿಸತೊಡಗಿದ್ದಾರೆ. ನಗರದ ಮಂದಿಯೂ ಮಳೆಯ ನೀರು ಚರಂಡಿಯಲ್ಲಿ ತುಂಬಿ ರಾಡಿ ಎಬ್ಬಿಸುವಾಗ ಬೈದುಕೊಳ್ಳಬಹುದು...

ಹೌಸ್‌ ಫುಲ್…ಮಹಾನಗರಗಳು ಭರ್ತಿಯಾಗಿವೆ !

ಖಂಡಿತಾ ಇದರಲ್ಲಿ ಅನುಮಾನವೇ ಇಲ್ಲ, ಅನುಮಾನ ಪಡುವುದೂ ಬೇಕಿಲ್ಲ. ದಿನೇ ದಿನೆ ನಗರಗಳ ಸ್ಫೋಟವನ್ನು ಗಮನಿಸಿದರೆ ಭಯವಾಗುವುದೂ ಉಂಟು, ಆತಂಕವಾಗುವುದೂ ಉಂಟು. ಕೈಗಾರೀಕರಣದ ಕಲ್ಪನೆಯಲ್ಲಿ ಈ ಕೇಂದ್ರೀಕೃತ ವ್ಯವಸ್ಥೆಯ ನಗರಗಳನ್ನು ಸೃಷ್ಟಿಸಿಕೊಳ್ಳುತ್ತಾ ಹೊರಟೆವು. ಹತ್ತು ಪಟ್ಟಣ ಸೇರಿ ಒಂದು ದೊಡ್ಡ ಪಟ್ಟಣವಾಯಿತು. ಕ್ರಮೇಣ ಅಂಥ ಹತ್ತು ದೊಡ್ಡ ಪಟ್ಟಣ ಸೇರಿ ಒಂದು ನಗರವಾಯಿತು. ಆ...

ನದಿಗಳನ್ನು ಮಲಿನಗೊಳಿಸುವ ಚಟ

ನದಿಗಳ ಅಗತ್ಯವೇ ನಮಗಿನ್ನೂ ಅರ್ಥವಾಗಿಲ್ಲ. ಐದು ವರ್ಷಗಳಲ್ಲಿ ಈ ಮಾಲಿನ್ಯಗೊಳಿಸುವ ನಮ್ಮ ಚಟ ದುಪ್ಪಟ್ಟು ಬೆಳೆದಿದೆ ಎಂದರೆ ನಂಬಲೇಬೇಕು. * ನಮ್ಮ ದೇಶದಲ್ಲಿ ಯಾವ ನದಿ ಇನ್ನೂ ಪವಿತ್ರವಾಗಿರಬಹುದು? ಮಲಿನಗೊಳ್ಳದಿರಬಹುದು? ಎಂದು ಅಧ್ಯಯನ ಮಾಡ ಹೊರಟರೆ ನಮಗೆ ಸಿಗುವುದು ಶೂನ್ಯವೇ ಹೊರತು ಮತ್ತೇನೂ ಅಲ್ಲ. ಅನಿಯಂತ್ರಿತ ನಗರೀಕರಣ ಸೃಷ್ಟಿಸುತ್ತಿರುವ ಸಮಸ್ಯೆಗಳು ಬೇರೆ ಎಂದು ಕೆಲವೊಮ್ಮೆ ಯೋಚಿಸಬಹುದು. ಆದರೆ,...

ಮತ್ತಷ್ಟು ಅಡ್ಡರಸ್ತೆಗಳನ್ನು ಸೃಷ್ಟಿಸಿಕೊಳ್ಳುತ್ತಾ…

ಬೆಳಕಿಗೆ ಭಾವವಿದೆ ಎಂದಾದರೆ, ಕತ್ತಲೆಗೆ ಜೀವವಿದೆ ಎಂದೆನಿಸುವುದು ನಗರಗಳಲ್ಲಿನ ಕಣ್ಣು ಕೋರೈಸುವ ನಿಯಾನ್‌ ಬೆಳಕಿನಲ್ಲಿ ಮುಳುಗಿದಾಗ. ಅಡ್ಡರಸ್ತೆಯ ಜಮಾನದಲ್ಲಿ ಕಳೆದು ಹೋಗುವ ಮೊದಲು ಕತ್ತಲೆಯನ್ನು ಪ್ರೀತಿಸುವುದನ್ನು ಕಳೆಯಬೇಕು. ದೂರದೊಂದು ತೀರದಿಂದ ತೇಲಿ ಪಾರಿಜಾತ ಗಂಧಕೆ ಮನಸೋತು ಹೊರಟವರು ವಾಪಸು ಹೊರಡಬೇಕಿದೆ.  * ನಗರಗಳೆಂದರೆ ಕಣ್ಣು ಕೋರೈಸುವ ಬೆಳಕಿದ್ವಂತೆ. ಕತ್ತಲೆಯಲ್ಲಿ ಬದುಕುವುದು ಕಷ್ಟವೆಂದು ಬೆಳಕಿಗೆ ಬರಬಹುದು. ಅದು ಒಂದು...

ಹಳ್ಳಿಗಳ ಭಾರತ ನಗರಗಳ ಇಂಡಿಯಾ ಆಗುವ ಮುನ್ನ

ನಾವು ಭಾರತದ ಬಗ್ಗೆ ಮಾತನಾಡುವ, ಚರ್ಚಿಸುವ ಹಾಗೂ ಆ ಕುರಿತು ಹೆಚ್ಚು ಸಕಾರಾತ್ಮಕವಾಗಿ ಕಾಣುವ ಹೊತ್ತು ಇದು. ಹಾಗೆಂದು ಅಷ್ಟಕ್ಕೇ ನಿಂತರೆ ಸಾಲದು. ಬರಿದಾಗುತ್ತಿರುವ ಭಾರತವನ್ನು ತುಂಬಿಸಿಟ್ಟುಕೊಳ್ಳಲು ಏನೇನು ಪರಿಶ್ರಮ ಪಡಬೇಕೋ ಅದನ್ನೂ ಪಡುವ ಹೊತ್ತಿದು. ಯಾಕೆಂದರೆ ಭವ್ಯ ಭಾರತ ಬರಿದಾಗುತ್ತಿದೆ ಇಂಡಿಯಾ ದ ಎದುರು. ಭಾರತದ ಆತ್ಮ ಹಳ್ಳಿ ಎಂದವರು ಕೇವಲ ಮಹಾತ್ಮ ಗಾಂಧೀಜಿಯವರೊಬ್ಬರಷ್ಟೇ ಅಲ್ಲ...
- Advertisement -spot_img

Latest News

ಈರುಳ್ಳಿ ಕಣ್ಣೀರು ತರಿಸಲಿಲ್ಲ; ದರ ಕಣ್ಣೀರು ಬರಿಸಿತು !

ಮುಂಬಯಿ: ಯಾಕೋ ಈರುಳ್ಳಿ ಬೆಳೆಗಾರರ ಕಷ್ಟ ಬಗೆಹರಿಯುವಂತೆ ಕಾಣುತ್ತಿಲ್ಲ. ಹಾಗಾಗಿ ಸಾಮಾನ್ಯವಾಗಿ ಗ್ರಾಹಕರು ಈರುಳ್ಳಿಯನ್ನುಕತ್ತರಿಸುವಾಗ ಪಡುವ ಸಂಕಟ-ಸಂಕಷ್ಟವನ್ನು ಬೆಳೆಗಾರರು ಅದನ್ನು ಮಾರುವಾಗ ಎದುರಿಸುತ್ತಿದ್ದಾರೆ. ಪ್ರತಿ ಬಾರಿ ಈರುಳ್ಳಿ...
- Advertisement -spot_img