Thursday, February 6, 2025
No menu items!

rurban india

ಏಷ್ಯಾದ ಶ್ರೀಮಂತ ಹಳ್ಳಿ ಗುಜರಾತಿನಲ್ಲಿದೆ, ಅಲ್ಲಿ ಎಲ್ಲವೂ ಇದೆ !

ಗುಜರಾತ್‌ ಮಾಡೆಲ್‌ ಎಂದು ಪ್ರಚಾರ ಮಾಡುತ್ತಿದ್ದವರು ಇನ್ನೊಮ್ಮೆ ಶರ್ಟ್‌ ನ ಕಾಲರ್‌ ನ್ನು ಮೇಲಕ್ಕೆ ಕೊಡವಬಹುದು. ಅದರಂತೆಯೇ ಗುಜರಾತ್‌ ಏನು ಮಹಾ ಎನ್ನುವವರು ಮತ್ತೊಮ್ಮೆ ಮೂಗು ಮುರಿಯಬಹುದು. ಇವೆಲ್ಲರ ಮಧ್ಯೆ ವಾಸ್ತವ ಏನೆಂದರೆ ಗುಜರಾತಿನ ಒಂದು ಸಣ್ಣ ಹಳ್ಳಿ ದೊಡ್ಡ ಸುದ್ದಿ ಮಾಡಿದೆ. ಈ ಸುದ್ದಿ ಮಾಡಿರುವುದು ಯಾವುದೋ ನೇತ್ಯಾತ್ಮಕ ಕಾರಣಕ್ಕಲ್ಲ, ಬದಲಾಗಿ ಧನಾತ್ಮಕ ಕಾರಣಕ್ಕೆ. ಶ್ರೀಮಂತಿಕೆ...

ಇದು ಡಾರ್ಜಿಲಿಂಗ್‌ ಸಮಸ್ಯೆಯಷ್ಟೇ ಎಂದುಕೊಳ್ಳಬೇಡಿ; ನಮ್ಮ ಊರಿನದ್ದೂ ಸಹ

ಪ್ರವಾಸೋದ್ಯಮ ಭವಿಷ್ಯದ ಉದ್ಯಮ, ಉದ್ಯೋಗ ಕ್ಷೇತ್ರ ಎಂದೆಲ್ಲ ಬಿಂಬಿಸಲಾಗುತ್ತಿದೆ. ನಿಜವೂ ಇರಬಹುದು. ಪರಿಸರವನ್ನೂ ಉಳಿಸಿಕೊಂಡು ಹೇಗೆ ಪ್ರವಾಸೋದ್ಯಮವನ್ನು ಬೆಳೆಸಿಕೊಳ್ಳಬಹುದು ಎಂಬುದರ ಬಗ್ಗೆಯೂ ಚರ್ಚೆ ನಡೆದಿದೆ. ಅವರು ಆ ಊರಿನಲ್ಲಿ ಆ ಗಿಡ ನೆಟ್ಟರು, ಚೆನ್ನಾಗಿದೆ, ಒಳ್ಳೆ ಹೂವುಗಳು ಬಿಟ್ಟಿವೆ. ಹೂವುಗಳು ಸುಂದರವಾಗಿವೆ ಎಂದು ಒಂದು ಕಡ್ಡಿ ತಂದು ನಮ್ಮ ಊರಿನ ಮಣ್ಣಿನಲ್ಲಿ ನೆಟ್ಟರೆ ಬರುತ್ತದೆಯೇ? ಗೊತ್ತಿಲ್ಲ,...

Rural Life: ನಾವು ರೈತರು, ನಮ್ಮ ಮಕ್ಕಳಿಗೂ ಹೆಣ್ಣು ಕೊಡಿ !

ರೈತರ ಮಕ್ಕಳಿಗೆ ಮದುವೆಯಾಗಲಿಕ್ಕೆ ಹೆಣ್ಣು ಸಿಗುತ್ತಿಲ್ಲ..ಯಾವ ಪೋಷಕರೂ ರೈತರ ಮಗನಿಗೆ ತಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡುವುದಿಲ್ಲವಂತೆ. ಈ ಸಮಸ್ಯೆ ಇನ್ನೂ ಹಲವು ಕ್ಷೇತ್ರದ ಉದ್ಯೋಗಿಗಳಿಗೆ ಎದುರಾಗಿದೆ. ಮುಖ್ಯವಾಗಿ ಸ್ವಯಂ ಉದ್ಯೋಗವೆಂದರೆ ಸ್ವಲ್ಪ ಹಿಂದೆಯೇ. ಬಹುತೇಕರ ಒಲವು ಐಟಿ ಕ್ಷೇತ್ರದವರ ಮೇಲೆ. ಅದರಲ್ಲೂ ಒಂದು ತಮಾಷೆ ಇದೆ. ಮೊದ ಮೊದಲು ಐಟಿ ಕ್ಷೇತ್ರದವರಾಗಿದ್ದರೆ ಪರವಾಗಿಲ್ಲ,...

ನಿಮ್ಮೂರಿನ ಒಂದು ದಿನಸಿ ಅಂಗಡಿ ಮುಚ್ಚಿದರೆ ಏನು ಮಹಾ ಎನ್ನಬೇಡಿ

ಒಂದು ಪಟ್ಟಣದಲ್ಲಿ ಸಣ್ಣದೊಂದು ದಿನಸಿ ಅಂಗಡಿ ಮುಚ್ಚುತ್ತಿದೆ ಎಂದರೆ ಯಾರಿಗೂ ಏನೂ ಅನಿಸದು. ಯಾರೂ ಅದರ ಬಗ್ಗೆ ಎರಡನೆಯದಾಗಿ ಯೋಚಿಸುವುದಿಲ್ಲ. ಅದೇ ಒಂದು ಪಟ್ಟಣಕ್ಕೆ ಒಂದು ಮಾಲ್‌ ಬರುತ್ತಿದೆ ಎಂದರೆ ಊರಿನಲ್ಲೆಲ್ಲ ಕೇವಲ ಚರ್ಚೆ ಮಾಡುವುದಿಲ್ಲ, ಸಂಭ್ರಮಿಸುವ ಪರಿಯೂ ಇದೆ. ಆದರೆ ತುಸು ಕಷ್ಟ ಎನಿಸಿದರೂ ನಾವು ಮೊದಲು ಚರ್ಚಿಸಬೇಕಾದದ್ದು ದಿನಸಿ ಅಂಗಡಿ ಮುಚ್ಚಲು...

ನೀವೂ ಗ್ರಾಮೀಣ ಪಡೆಯ ಸದಸ್ಯರಾಗಿ

ಭಾರತ ಇರುವುದು ಹಳ್ಳಿಗಳಲ್ಲಿ ಎಂಬ ಮಾತು ಕೊಂಚ ಹಳೆಯದು. ಈಗ ಆ ಹಳ್ಳಿಗಳೇ ನವರೂಪದಲ್ಲಿ ಅರೆಪಟ್ಟಣಗಳಾಗಿ ರೂಪುಗೊಳ್ಳುತ್ತಿವೆ. ಇಂತಹ ಅರೆಪಟ್ಟಣಗಳ ಆರೋಗ್ಯವನ್ನು ಕಾಪಾಡುವುದು ಬಹಳ ಮುಖ್ಯವಾದುದು. ಅದರಲ್ಲೂ ಭಾರತದ ಮಹಾನಗರಗಳ ಆರೋಗ್ಯದಲ್ಲಿ ಏರುಪೇರು ಆಗಬಾರದೆಂದರೆ ಈ ಅರೆ ಪಟ್ಟಣಗಳು, ಹಳ್ಳಿಗಳ ಆರೋಗ್ಯ ಸುಸ್ಥಿರವಾಗಿರಬೇಕು. ಈ ಮಹಾ ಪಯಣದಲ್ಲಿ ಗ್ರಾಮೀಣ ಪತ್ರಕರ್ತರು, ನಾಗರಿಕರು, ವಿದ್ಯಾವಂತ ಉತ್ಸಾಹಿಗಳು,...

ದೇವರ ನಾಡಿನಲ್ಲಿ ಇತ್ತೀಚೆಗೆ ಬರವೇ ಕಾಯಂ ಅತಿಥಿ !

ಇಡುಕ್ಕಿ: ಕೇರಳದ ಇಡುಕ್ಕಿ ಜಿಲ್ಲೆ ತಿಳಿದಿರಬಹುದು. ನೆನಪು ಮಾಡಿಕೊಳ್ಳಿ. ನಾಲ್ಕು ವರ್ಷದ ಹಿಂದೆ ಬಿದ್ದ ದಿಢೀರ್‌ ಮಳೆಗೆ ಊರಿಗೇ ಊರೇ ಕೊಚ್ಚಿ ಹೋಗಿತ್ತು. ಒಮ್ಮೆಲೆ ಶುರುವಾದ ಮಳೆ ಅಬ್ಬರಿಸತೊಡಗಿದಾಗ ಇದೂ ಎಂದಿನ ಮಳೆ ಅಂದುಕೊಂಡಿದ್ದರು. ಆದರೆ ಕೆಲವೇ ಕ್ಷಣಗಳಲ್ಲಿ ಅದು ಸುಳ್ಳೆನಿಸಿ ಸೇತುವೆ, ಮನೆ ಮಾರು ಎಲ್ಲವೂ ಕುಸಿಯತೊಡಗಿದಾಗ ಪ್ರಳಯದ ಅನುಭವವಾಗಿತ್ತು. ವಿಚಿತ್ರವೆಂದರೆ ಅದೇ ಜಿಲ್ಲೆಯಲ್ಲಿಈ...

ಕೊಡಗು ಮರುಗುತ್ತಿದೆ; ಕಾವೇರಿ ಸೊರಗುತ್ತಿದ್ದಾಳೆ !

ನಗರಗಳಿಗೆ ಜೀವಜಲವಾದ ನದಿಗಳ ಮೂಲವೇ ನೀರಿನ ಕೊರತೆಯನ್ನು ಅನುಭವಿಸಲು ಆರಂಭಿಸದರೆ ಇದಕ್ಕೆ ಏನೆನ್ನಬೇಕು? ನಮ್ಮ ನಗರೀಕರಣದ ಹಪಹಪಿಸುವಿಕೆ ಇದಕ್ಕೆ ಕಾರಣವೆನ್ನಬೇಕೇ ಅಥವಾ ಲಭ್ಯ ನೀರನ್ನು ಸಂಪನ್ಮೂಲವನ್ನಾಗಿ ತಿಳಿಯದೇ ಅಂಧಾದುಂಧಿ ಮಾಡಿದುದರ ಪರಿಣಾಮವೇ? ನಮ್ಮ ನಿರ್ಲಕ್ಷ್ಯವೇ, ಅಸಡ್ಡೆಯೇ? ಎಂದು ವಿಶ್ಲೇಷಿಸಿದ್ದಾರೆ ಶ್ಯಾಮಸುಂದರ್.‌ ಕೊಡಗು ಮರುಗುತ್ತಿದೆ; ಕಾಫಿ ಕರಟುತ್ತಿದೆ ; ಕಾವೇರಿ ಸೊರಗುತ್ತಿದ್ದಾಳೆ ! ಒಂದೇ ಸಾಲಿನಲ್ಲಿ ಸರಳವಾಗಿ...

ಹೌಸ್‌ ಫುಲ್…ಮಹಾನಗರಗಳು ಭರ್ತಿಯಾಗಿವೆ !

ಖಂಡಿತಾ ಇದರಲ್ಲಿ ಅನುಮಾನವೇ ಇಲ್ಲ, ಅನುಮಾನ ಪಡುವುದೂ ಬೇಕಿಲ್ಲ. ದಿನೇ ದಿನೆ ನಗರಗಳ ಸ್ಫೋಟವನ್ನು ಗಮನಿಸಿದರೆ ಭಯವಾಗುವುದೂ ಉಂಟು, ಆತಂಕವಾಗುವುದೂ ಉಂಟು. ಕೈಗಾರೀಕರಣದ ಕಲ್ಪನೆಯಲ್ಲಿ ಈ ಕೇಂದ್ರೀಕೃತ ವ್ಯವಸ್ಥೆಯ ನಗರಗಳನ್ನು ಸೃಷ್ಟಿಸಿಕೊಳ್ಳುತ್ತಾ ಹೊರಟೆವು. ಹತ್ತು ಪಟ್ಟಣ ಸೇರಿ ಒಂದು ದೊಡ್ಡ ಪಟ್ಟಣವಾಯಿತು. ಕ್ರಮೇಣ ಅಂಥ ಹತ್ತು ದೊಡ್ಡ ಪಟ್ಟಣ ಸೇರಿ ಒಂದು ನಗರವಾಯಿತು. ಆ...

ಕೇಪ್‌ ಟೌನ್‌ ನ ಕಥೆಯಷ್ಟೇ ಅಲ್ಲ, ನಮ್ಮ ನಗರಗಳದ್ದೂ ಅದೇ

ಡೇ ಜೀರೋ ಕಳೆದ ವಾರದಲ್ಲಿ ಬಹಳ ಚರ್ಚೆಗೀಡಾದ ಪದ. ನಮ್ಮ ನಗರಗಳಲ್ಲಿನ ನಳ್ಳಿಗಳೆಲ್ಲಾ ಥಟಕ್ಕನೆ ನೀರು ಕೊಡುವುದಿಲ್ಲ ಎಂದರೆ ಹೇಗಿರಬಹುದು. ಅಂಥದೊಂದು ಸ್ಥಿತಿ ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲೇ ಉದ್ಭವಿಸಿದಂತೆ. ಬೆಂಗಳೂರೂ ಅದೇ ಸಾಲಿನಲ್ಲಿದೆಯಂತೆ. * ನಾಲ್ಕು ದಿನಗಳಿಂದ ಜಗತ್ತಿನ ಎಲ್ಲ ನಗರಗಳ ನಾಗರೀಕರನ್ನು ಬೆಚ್ಚಿ ಬೀಳಿಸಿರುವುದು “ಡೇ ಜೀರೋ’ ಎಂಬ ಪದ. ಈ ಪದಕ್ಕೆ ನಗರೀಕರಣದ ಶಬ್ದಕೋಶದಲ್ಲಿ ...

ನಿತ್ಯವೂ ಸೂರ್ಯ ಪಯಣ ಆರಂಭಿಸುವುದೇ ಈ ಹಳ್ಳಿಯಿಂದ !

ಬೆಳಕೆಂದರೆ ವಿದ್ಯುತ್‌ ಎನ್ನುವ ಕಾಲ ಸರಿದು ಹೋಗುತ್ತಿದೆ. ಬೆಳಕೆಂದರೆ ಸೂರ್ಯ ಎನ್ನುವ ಕಾಲ ಹತ್ತಿರವಾಗಿದೆ, ಹತ್ತಿರವಾಗುತ್ತಿದೆ. ಪ್ರತಿ ಹಂತದಲ್ಲೂ ಸೌರಶಕ್ತಿಯ ಪ್ರಭಾವ ಹೆಚ್ಚಾಗುತ್ತಿದೆ. ಇವೆಲ್ಲದರ ಮಧ್ಯೆ ಹತ್ತು ವರ್ಷಗಳ ಹಿಂದೆಯೇ ಸೂರ್ಯನನ್ನು ಕರೆಸಿ ಕುಳ್ಳಿರಿಸಿಕೊಂಡ ಹಳ್ಳಿಯ ಕಥೆ ಕೇಳಿ. ಸೂರ್ಯ ಮೊದಲು ಬರುವುದು ಎಲ್ಲಿಗೆ ಅಂದರೆ ಹುಟ್ಟೋದು ಎಲ್ಲಿ ಎಂದು ಪ್ರಶ್ನೆ ಕೇಳಿದರೆ ಜಪಾನ್‌ ಎನ್ನಬಹುದು. ಯಾಕೆಂದರೆ...
- Advertisement -spot_img

Latest News

ಈರುಳ್ಳಿ ಕಣ್ಣೀರು ತರಿಸಲಿಲ್ಲ; ದರ ಕಣ್ಣೀರು ಬರಿಸಿತು !

ಮುಂಬಯಿ: ಯಾಕೋ ಈರುಳ್ಳಿ ಬೆಳೆಗಾರರ ಕಷ್ಟ ಬಗೆಹರಿಯುವಂತೆ ಕಾಣುತ್ತಿಲ್ಲ. ಹಾಗಾಗಿ ಸಾಮಾನ್ಯವಾಗಿ ಗ್ರಾಹಕರು ಈರುಳ್ಳಿಯನ್ನುಕತ್ತರಿಸುವಾಗ ಪಡುವ ಸಂಕಟ-ಸಂಕಷ್ಟವನ್ನು ಬೆಳೆಗಾರರು ಅದನ್ನು ಮಾರುವಾಗ ಎದುರಿಸುತ್ತಿದ್ದಾರೆ. ಪ್ರತಿ ಬಾರಿ ಈರುಳ್ಳಿ...
- Advertisement -spot_img