ಗುಜರಾತ್ ಮಾಡೆಲ್ ಎಂದು ಪ್ರಚಾರ ಮಾಡುತ್ತಿದ್ದವರು ಇನ್ನೊಮ್ಮೆ ಶರ್ಟ್ ನ ಕಾಲರ್ ನ್ನು ಮೇಲಕ್ಕೆ ಕೊಡವಬಹುದು. ಅದರಂತೆಯೇ ಗುಜರಾತ್ ಏನು ಮಹಾ ಎನ್ನುವವರು ಮತ್ತೊಮ್ಮೆ ಮೂಗು ಮುರಿಯಬಹುದು.
ಇವೆಲ್ಲರ ಮಧ್ಯೆ ವಾಸ್ತವ ಏನೆಂದರೆ ಗುಜರಾತಿನ ಒಂದು ಸಣ್ಣ ಹಳ್ಳಿ ದೊಡ್ಡ ಸುದ್ದಿ ಮಾಡಿದೆ. ಈ ಸುದ್ದಿ ಮಾಡಿರುವುದು ಯಾವುದೋ ನೇತ್ಯಾತ್ಮಕ ಕಾರಣಕ್ಕಲ್ಲ, ಬದಲಾಗಿ ಧನಾತ್ಮಕ ಕಾರಣಕ್ಕೆ.
ಶ್ರೀಮಂತಿಕೆ...
ರೈತರ ಮಕ್ಕಳಿಗೆ ಮದುವೆಯಾಗಲಿಕ್ಕೆ ಹೆಣ್ಣು ಸಿಗುತ್ತಿಲ್ಲ..ಯಾವ ಪೋಷಕರೂ ರೈತರ ಮಗನಿಗೆ ತಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡುವುದಿಲ್ಲವಂತೆ. ಈ ಸಮಸ್ಯೆ ಇನ್ನೂ ಹಲವು ಕ್ಷೇತ್ರದ ಉದ್ಯೋಗಿಗಳಿಗೆ ಎದುರಾಗಿದೆ. ಮುಖ್ಯವಾಗಿ ಸ್ವಯಂ ಉದ್ಯೋಗವೆಂದರೆ ಸ್ವಲ್ಪ ಹಿಂದೆಯೇ. ಬಹುತೇಕರ ಒಲವು ಐಟಿ ಕ್ಷೇತ್ರದವರ ಮೇಲೆ. ಅದರಲ್ಲೂ ಒಂದು ತಮಾಷೆ ಇದೆ. ಮೊದ ಮೊದಲು ಐಟಿ ಕ್ಷೇತ್ರದವರಾಗಿದ್ದರೆ ಪರವಾಗಿಲ್ಲ,...
ಬೆಂಗಳೂರು ಮತ್ತಷ್ಟು ಕಾವೇರಿ ನೀರನ್ನು ತರಿಸಿಕೊಳ್ಳಲು ಸಿದ್ಧವಾಗುತ್ತಿರುವ ಹೊತ್ತು. ಹಲವು ನಗರಗಳಲ್ಲಿ ನೀರಿನ ಬೇಗೆ ಹೆಚ್ಚಾಗಿ ನಾಗರಿಕರು ಪರಸ್ಪರ ಯುದ್ಧಕ್ಕೆ ಸಜ್ಜಾಗುತ್ತಿರುವ ಹೊತ್ತು. ರಾಜಕಾರಣಿಗಳು ಪರಸ್ಪರ ಧಿಕ್ಕಾರ ಕೂಗಿಕೊಂಡು, ಘೋಷಣೆ ಹಾಕಿಕೊಳ್ಳುತ್ತಾ ಬೈದಾಡಿಕೊಳ್ಳುತ್ತಿರುವ ಹೊತ್ತು..ಈ ಹೊತ್ತು ಇಷ್ಟಕ್ಕೇ ಮುಗಿಯುವುದಿಲ್ಲ. ನೀರಿನ ಕೊರತೆಯ ಹಿಡಿತ ದಿನೇದಿನೆ ನಗರಗಳಲ್ಲಿ ಬಿಗಿಯಾಗುತ್ತಿದೆ. ಈಗಾಗಲೇ ಬಹುತೇಕ ನಗರ, ಅರೆನಗರಗಳಲ್ಲಿ ನೀರಿನ...
ಭಾರತ ಇರುವುದು ಹಳ್ಳಿಗಳಲ್ಲಿ ಎಂಬ ಮಾತು ಕೊಂಚ ಹಳೆಯದು. ಈಗ ಆ ಹಳ್ಳಿಗಳೇ ನವರೂಪದಲ್ಲಿ ಅರೆಪಟ್ಟಣಗಳಾಗಿ ರೂಪುಗೊಳ್ಳುತ್ತಿವೆ. ಇಂತಹ ಅರೆಪಟ್ಟಣಗಳ ಆರೋಗ್ಯವನ್ನು ಕಾಪಾಡುವುದು ಬಹಳ ಮುಖ್ಯವಾದುದು. ಅದರಲ್ಲೂ ಭಾರತದ ಮಹಾನಗರಗಳ ಆರೋಗ್ಯದಲ್ಲಿ ಏರುಪೇರು ಆಗಬಾರದೆಂದರೆ ಈ ಅರೆ ಪಟ್ಟಣಗಳು, ಹಳ್ಳಿಗಳ ಆರೋಗ್ಯ ಸುಸ್ಥಿರವಾಗಿರಬೇಕು. ಈ ಮಹಾ ಪಯಣದಲ್ಲಿ ಗ್ರಾಮೀಣ ಪತ್ರಕರ್ತರು, ನಾಗರಿಕರು, ವಿದ್ಯಾವಂತ ಉತ್ಸಾಹಿಗಳು,...
ಖಂಡಿತಾ ಇದರಲ್ಲಿ ಅನುಮಾನವೇ ಇಲ್ಲ, ಅನುಮಾನ ಪಡುವುದೂ ಬೇಕಿಲ್ಲ. ದಿನೇ ದಿನೆ ನಗರಗಳ ಸ್ಫೋಟವನ್ನು ಗಮನಿಸಿದರೆ ಭಯವಾಗುವುದೂ ಉಂಟು, ಆತಂಕವಾಗುವುದೂ ಉಂಟು. ಕೈಗಾರೀಕರಣದ ಕಲ್ಪನೆಯಲ್ಲಿ ಈ ಕೇಂದ್ರೀಕೃತ ವ್ಯವಸ್ಥೆಯ ನಗರಗಳನ್ನು ಸೃಷ್ಟಿಸಿಕೊಳ್ಳುತ್ತಾ ಹೊರಟೆವು. ಹತ್ತು ಪಟ್ಟಣ ಸೇರಿ ಒಂದು ದೊಡ್ಡ ಪಟ್ಟಣವಾಯಿತು. ಕ್ರಮೇಣ ಅಂಥ ಹತ್ತು ದೊಡ್ಡ ಪಟ್ಟಣ ಸೇರಿ ಒಂದು ನಗರವಾಯಿತು. ಆ...
ಡೇ ಜೀರೋ ಕಳೆದ ವಾರದಲ್ಲಿ ಬಹಳ ಚರ್ಚೆಗೀಡಾದ ಪದ. ನಮ್ಮ ನಗರಗಳಲ್ಲಿನ ನಳ್ಳಿಗಳೆಲ್ಲಾ ಥಟಕ್ಕನೆ ನೀರು ಕೊಡುವುದಿಲ್ಲ ಎಂದರೆ ಹೇಗಿರಬಹುದು. ಅಂಥದೊಂದು ಸ್ಥಿತಿ ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲೇ ಉದ್ಭವಿಸಿದಂತೆ. ಬೆಂಗಳೂರೂ ಅದೇ ಸಾಲಿನಲ್ಲಿದೆಯಂತೆ.
*
ನಾಲ್ಕು ದಿನಗಳಿಂದ ಜಗತ್ತಿನ ಎಲ್ಲ ನಗರಗಳ ನಾಗರೀಕರನ್ನು ಬೆಚ್ಚಿ ಬೀಳಿಸಿರುವುದು “ಡೇ ಜೀರೋ’ ಎಂಬ ಪದ. ಈ ಪದಕ್ಕೆ ನಗರೀಕರಣದ ಶಬ್ದಕೋಶದಲ್ಲಿ ...
ಬೆಳಕೆಂದರೆ ವಿದ್ಯುತ್ ಎನ್ನುವ ಕಾಲ ಸರಿದು ಹೋಗುತ್ತಿದೆ. ಬೆಳಕೆಂದರೆ ಸೂರ್ಯ ಎನ್ನುವ ಕಾಲ ಹತ್ತಿರವಾಗಿದೆ, ಹತ್ತಿರವಾಗುತ್ತಿದೆ. ಪ್ರತಿ ಹಂತದಲ್ಲೂ ಸೌರಶಕ್ತಿಯ ಪ್ರಭಾವ ಹೆಚ್ಚಾಗುತ್ತಿದೆ. ಇವೆಲ್ಲದರ ಮಧ್ಯೆ ಹತ್ತು ವರ್ಷಗಳ ಹಿಂದೆಯೇ ಸೂರ್ಯನನ್ನು ಕರೆಸಿ ಕುಳ್ಳಿರಿಸಿಕೊಂಡ ಹಳ್ಳಿಯ ಕಥೆ ಕೇಳಿ.
ಸೂರ್ಯ ಮೊದಲು ಬರುವುದು ಎಲ್ಲಿಗೆ ಅಂದರೆ ಹುಟ್ಟೋದು ಎಲ್ಲಿ ಎಂದು ಪ್ರಶ್ನೆ ಕೇಳಿದರೆ ಜಪಾನ್ ಎನ್ನಬಹುದು.
ಯಾಕೆಂದರೆ...
ಡಿಜಿಟಲ್ ಮಳಿಗೆ ಎದುರು ನಿತ್ಯವೂ ನಿಲ್ಲಬೇಕಾದ ಅಗತ್ಯ ಖಂಡಿತಾ ಇದೆಯೇ> ಈ ಮಾತಿಗೆ ಹಲವರಿಂದ ಸಿಗುವ ಉತ್ತರ ಬಹಳ ಸರಳವಾದದ್ದು. ʼಏನೂ ಆಗತ್ಯವಿಲ್ಲ.". ಅದರೆ ನಾವು ಆಗತ್ಯಕ್ಕಿಂತ ಹೆಚ್ಚು ಯೋಚಿಸುತ್ತಿದ್ದೇವೆಯೇ? ಗೊತ್ತಿಲ್ಲ
ನಾವು ಭಾರತದ ಬಗ್ಗೆ ಮಾತನಾಡುವ, ಚರ್ಚಿಸುವ ಹಾಗೂ ಆ ಕುರಿತು ಹೆಚ್ಚು ಸಕಾರಾತ್ಮಕವಾಗಿ ಕಾಣುವ ಹೊತ್ತು ಇದು. ಹಾಗೆಂದು ಅಷ್ಟಕ್ಕೇ ನಿಂತರೆ ಸಾಲದು. ಬರಿದಾಗುತ್ತಿರುವ ಭಾರತವನ್ನು ತುಂಬಿಸಿಟ್ಟುಕೊಳ್ಳಲು ಏನೇನು ಪರಿಶ್ರಮ ಪಡಬೇಕೋ ಅದನ್ನೂ ಪಡುವ ಹೊತ್ತಿದು.
ಯಾಕೆಂದರೆ ಭವ್ಯ ಭಾರತ ಬರಿದಾಗುತ್ತಿದೆ ಇಂಡಿಯಾ ದ ಎದುರು.
ಭಾರತದ ಆತ್ಮ ಹಳ್ಳಿ ಎಂದವರು ಕೇವಲ ಮಹಾತ್ಮ ಗಾಂಧೀಜಿಯವರೊಬ್ಬರಷ್ಟೇ ಅಲ್ಲ...
ಒಂದು ಸಂಶೋಧನೆ ಹೀಗೆ ಹೇಳುತ್ತದೆ.
ಜಾಗತಿಕ ತಾಪಮಾನ, ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ತಗ್ಗಿಸಬೇಕಾದರೆ ಅಥವಾ ಸಮರ್ಥವಾಗಿ ಎದುರಿಸಬೇಕಾದರೆ ಒಂದು ಪರಿಹಾರವಿದೆ. ಅದೆಂದರೆ, ಭತ್ತ ಬೆಳೆಯುವ ಬದಲು ಬೇರೆ...