ನಾವು ಭಾರತದ ಬಗ್ಗೆ ಮಾತನಾಡುವ, ಚರ್ಚಿಸುವ ಹಾಗೂ ಆ ಕುರಿತು ಹೆಚ್ಚು ಸಕಾರಾತ್ಮಕವಾಗಿ ಕಾಣುವ ಹೊತ್ತು ಇದು. ಹಾಗೆಂದು ಅಷ್ಟಕ್ಕೇ ನಿಂತರೆ ಸಾಲದು. ಬರಿದಾಗುತ್ತಿರುವ ಭಾರತವನ್ನು ತುಂಬಿಸಿಟ್ಟುಕೊಳ್ಳಲು ಏನೇನು ಪರಿಶ್ರಮ ಪಡಬೇಕೋ ಅದನ್ನೂ ಪಡುವ ಹೊತ್ತಿದು.
ಯಾಕೆಂದರೆ ಭವ್ಯ ಭಾರತ ಬರಿದಾಗುತ್ತಿದೆ ಇಂಡಿಯಾ ದ ಎದುರು.
ಭಾರತದ ಆತ್ಮ ಹಳ್ಳಿ ಎಂದವರು ಕೇವಲ ಮಹಾತ್ಮ ಗಾಂಧೀಜಿಯವರೊಬ್ಬರಷ್ಟೇ ಅಲ್ಲ ಆಚಾರ್ಯ ವಿನೋಬಾರಿಂದ ಹಿಡಿದು ಹಲವರು. ಬ್ರಿಟಿಷರಿಗೂ ಕಣ್ಣಿದ್ದದ್ದು ಆಗಿನ ಕಾಲದಲ್ಲಿ ಭಾರತದಲ್ಲಿದ್ದ ಮೆಟ್ರೋ ಸಿಟಿ ಮಾದರಿಯ ಮೂರ್ನಾಲ್ಕು ನಗರಗಳ ಮೇಲಲ್ಲ; ಬದಲಾಗಿ ಇಡೀ ಇಂಗ್ಲೆಂಡಿನ ಆರ್ಥಿಕತೆಯನ್ನು ಮುಳುಗಿಸಿಬಿಡಬಹುದಾದಂಥ ಮಾದರಿ ಹೆಗ್ಗಡಗು ಆಗಿ ಕಾಣುತ್ತಿದ್ದ ಭಾರತದ ಮೇಲೆ. ಅದಕ್ಕೇ ಗುರಿ ಇಟ್ಟದ್ದು ನಗರಗಳ ಮೇಲಲ್ಲ; ಹಳ್ಳಿಗಳಲ್ಲಿನ ಬದುಕಿನ ಮೇಲೆ, ಬದುಕಿನ ಕ್ರಮದ ಮೇಲೆ, ಅಲ್ಲಿದ್ದ ಕೊರತೆಗಳೆನಿಸುವಂತದ್ದರ ಮೇಲೆ.
ನಗರಗಳ ಸೌಲಭ್ಯಗಳ ಪಟ್ಟಿಯನ್ನು ಗೋಡೆಗೆ ತೂಗು ಹಾಕಿ ಒಂದೊಂದನ್ನೆ ನಿಮ್ಮಲ್ಲಿಲ್ಲ ನಿಮ್ಮಲ್ಲಿಲ್ಲ ಎಂದು ಗುರುತು ಹಾಕುತ್ತಾ, ಭಾರತದ ಮಂದಿಯನ್ನು ನಂಬಿಸುತ್ತಾ ಹದವಾಗಿ ಗ್ರಾಮೀಣ ಸಾಮ್ರಾಜ್ಯವೆಂಬ ಬೃಹತ್ ಹಡಗಿಗೆ ಒಂದೊಂದೇ ತೂತು ಮಾಡತೊಡಗಿದರು. ಇದೇನು ಸುಳ್ಳಲ್ಲ. ಅವರಿಗೆ ಭಾರತ ಒಂದು ಸ್ವಾವಲಂಬಿ ದೇಶವಾಗಿ ಬೆಳೆಯುವುದು ಬೇಕಾಗಿರಲಿಲ್ಲ, ಬದಲಾಗಿ ಕಚ್ಚಾವಸ್ತುಗಳ ಉತ್ಪತ್ತಿಯ ಕೋಠಿಯಾಗಿಯೋ, ತಮ್ಮ ಜಗತ್ತಿನ ಮಾರುಕಟ್ಟೆಗೆ ಬೇಕಾಗುವ ವಸ್ತುಗಳ ಪೂರೈಸುವ ಅಡುಗೆ ಮನೆಯಾಗಿಯೋ ಬಳಕೆಯಾಗಬೇಕು ಎಂಬ ಇರಾದೆ ಇತ್ತು. ಅಷ್ಟೇ ಮಾಡಿದ್ದರೆ ಸುಮ್ಮನಿರಬಹುದಿತ್ತೇನೋ. ಅಲ್ಲಿಗೆ ಸುಮ್ಮನಾಗಲಿಲ್ಲ.
ಭಾರತದಲ್ಲಿನ ಸ್ವ ಸಾಮರ್ಥ್ಯವನ್ನೇ ಕೊಲ್ಲಲು ತಮ್ಮ ದೇಶಗಳಿಂದ ವಸ್ತುಗಳನ್ನು ತಂದು ಸುರಿಯತೊಡಗಿದರು. ಉಂಡು ಹೋಗುವವರು ಕೊಂಡು ಹೋಗಲೂ ಮಾಡಿಕೊಂಡ ಲೆಕ್ಕಾಚಾರವಿದು. ಆ ಮೂಲಕ ನಮ್ಮದೆಲ್ಲವನ್ನೂ ಕೊಟ್ಟದ್ದಲ್ಲದೇ ಮೈಮೇಲೆ ಉಡಲೂ ಅವರಿಂದಲೇ ಕೇಳಬೇಕಾದ ಪರಿಸ್ಥಿತಿ ಉದ್ಭವಿಸಿದ್ದು. ಆಗ ಸ್ವದೇಶಿ ಆಂದೋಲನ, ಪರದೇಶಿ ವಸ್ತುಗಳ ವಿರೋಧದಂಥ ಚಳವಳಿ ಬರಬೇಕಾಯಿತು. ಚಂಪಾರಣ್ ಚಳವಳಿ ಹುಟ್ಟಿದ್ದೂ ಅಂಥದ್ದಕ್ಕೆ. ದಂಡಿ ಮಾರ್ಚ್ ಸಹ ನಡೆದದ್ದೂ ಅದಕ್ಕೆ. ಒಬ್ಬ ಬ್ಯಾರಿಸ್ಟರ್ ಗಾಂಧಿ ಮಹಾತ್ಮನಂತೆ ಅನಿಸಿದ್ದೂ ಇಂಥದ್ದೇ ಕೆಲವು ಕಾರಣಗಳಿಂದ.
ಇಂದು ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳಾಗಿವೆ. ಅಂದು ಹಚ್ಚಿದ ಸ್ವಾವಲಂಬನೆಯ ನಂದಾದೀಪ ಉರಿಯುತ್ತಿದೆ, ಆದರೆ ಪ್ರಜ್ವಲಿಸುತ್ತಿಲ್ಲ. ನಂದಿಹೋಗುವ ಭಯವೂ ಕಾಡತೊಡಗುತ್ತಿದೆ. ಯಾಕೆಂದರೆ ಹಳ್ಳಿಗಳ ಆತ್ಮವಾದ ಭಾರತ ನಿಧಾನವಾಗಿ ಕುಸಿಯತೊಡಗಿದೆ.
ಹಳ್ಳಿಗಳೆಲ್ಲ ಖಾಲಿಯಾಗತೊಡಗಿವೆ ಎಂಬುದು ಹಳೆಯ ಮಾತು. ಅದಕ್ಕೀಗ ಬಿರುಸು ಬಂದಿರುವು ನಿಜ. ಹಳ್ಳಿಯ ಆರ್ಥಿಕತೆಯ ಭಾಗವಾದ ಗ್ರಾಮೀಣ ಕೈಗಾರಿಕೆಗಳು ಹಾಗೂ ಆದಕ್ಕೆ ಪೂರಕವಾಗಿದ್ದ ಮಾನವ ಸಂಪನ್ಮೂಲಗಳು ನಗರದ ಪಾಲಾಗುತ್ತಿವೆ. ಅಷ್ಟೇ ಅಗಿದ್ದರೂ ಬೇರೆಯೇ ಕಥೆ ಇತ್ತು. ಆದರೆ ಕೆಲವೇ ನಿರ್ದಿಷ್ಟ ಕ್ಷೇತ್ರಗಳ ಪಾಲಾಗುತ್ತಿವೆ. ಉಳಿದ ಕ್ಷೇತ್ರಗಳಿಗೆ ಯಂತ್ರಗಳನ್ನು ಶೋಧಿಸತೊಡಗಿದ್ದೇವೆ. ಎಲ್ಲ ಕಡೆಗೂ ಹರಿಯತೊಡಗಿದೆ ಕಾರ್ಪೋರೇಟ್ ಕಂಪೆನಿಗಳ ವೈರ್ ಲೆಸ್ ವೈರ್‌ಗಳು. ಅವು ನಿಧಾನವಾಗಿ ಹಳ್ಳಿಯ ಸ್ಥಳೀಯ ಆರ್ಥಿಕತೆಯ ಕುತ್ತಿಗೆಯನ್ನು ಹಿಸುಕಬಹುದು. ಈ ಆತಂಕ ಎಲ್ಲ ಸಣ್ಣ ಪಟ್ಟಣಗಳ ಮಂದಿಯಲ್ಲೂ ಇದೆ.
ಇದೇ ಹಿನ್ನೆಲೆಯಲ್ಲಿ ಉದ್ಯೋಗವೆಂದರೆ ಸಿಟಿ ಎಂಬ ಕಲ್ಪನೆಗೆ ನೈಜತೆಯನ್ನು ತುಂಬುವ ಪ್ರಯತ್ನ ಭರದಿಂದ ನಡೆಯುತ್ತಿದೆ. ಆರಂಭದಲ್ಲಿ ಸರಕಾರಗಳು ಅದನ್ನೇ ಮಾಡಿದವು. ಬಳಿಕ ದೊಡ್ಡ ದೊಡ್ಡ ಕಂಪೆನಿಗಳು ಬರತೊಡಗಿದವು. ಉದ್ಯೋಗವೆಂಬುದು ಅಲ್ಲಿಯೇ ಸ್ಥಾಪನೆಯಾಗತೊಡಗಿತು. ಹೀಗೆ ಹರಿಯತೊಡಗಿದ ಹೊಸ ಸಾಧ್ಯತೆಗಳೆಂಭ ಲೆಕ್ಕಾಚಾರಗಳು ನಿಲ್ಲಲಿಲ್ಲ. ಇಂದಿಗೂ ಹರಿಯುತ್ತಲೇ ಇದೆ. ಅದರ ಹಿಂದೆಯೇ ನಮ್ಮ ಹಳ್ಳಿಗಳ, ಸಣ್ಣ ಪಟ್ಟಣಗಳ ಮಾನವ ಸಂಪನ್ಮೂಲಗಳೂ ಹರಿಯತೊಡಗಿವೆ.
ಒಂದು ನದಿಯ ನೀರು ಒಂದೆಡೆ ಹರಿದರೆ ಒಂದು ಸಂಗತಿ. ಅದೇ ಹತ್ತಾರು ನದಿಗಳ ನೀರು ಒಂದೆಡೆ ಸಾಗಿದರೆ ಸಾಗರವೆನ್ನಬಹುದು. ಅಲ್ಲಿ ಸಾಗರದ ಪಾತ್ರವಿದ್ದರೆ. ಇಲ್ಲವಾದರೆ ಅದು ಸಹಿಸದು. ಹಳ್ಳದ ಹಾಗೆಯೇ. ಹೆಚ್ಚಿನ ನೀರನ್ನು ಹೊರ ಹಾಕಲೇಬೇಕು. ಇಲ್ಲವಾದರೆ ಹಳ್ಳ ಕೋಡಿ ಒಡೆದಂತೆಯೇ ದಿಕ್ಕೆಟ್ಟು ಓಡಲು ಆರಂಭಿಸುತ್ತದೆ. ಈ ಮಾತು ನಗರಕ್ಕೂ ಅನ್ವಯವಾಗುವುದಿಲ್ಲವೇ? ಖಂಡಿತಾ ಆಗುತ್ತದೆ.
ಅದೇ ಕಾರಣಕ್ಕೆ ನಮ್ಮ ಊರಿನ ನದಿಗಳನ್ನು ನಮ್ಮಲ್ಲೇ ಹರಿಯುವಂತೆ ಮಾಡಿಕೊಳ್ಳುವುದು ಉಚಿತ. ಆಗ ನದಿ ಉಳಿಯುತ್ತದೆ, ಪರಿಸರ ಉಳಿಯುತ್ತದೆ, ಸ್ಥಳೀಯ ಆರ್ಥಿಕತೆ ಉಳಿಯುತ್ತದೆ, ಹಳ್ಳಿಗಳು ಉಳಿಯುತ್ತವೆ, ಭಾರತ ಉಳಿಯುತ್ತದೆ !
ಅದಕ್ಕೆ ಸಿದ್ಧವಾಗುವ ಹೊತ್ತು ಈಗ.
ಹಳ್ಳಿಗಳ ಭಾರತ ನಗರಗಳ ಇಂಡಿಯಾ ಆಗುವ ಮುನ್ನ