ಬೆಂಗಳೂರು ಮತ್ತಷ್ಟು ಕಾವೇರಿ ನೀರನ್ನು ತರಿಸಿಕೊಳ್ಳಲು ಸಿದ್ಧವಾಗುತ್ತಿರುವ ಹೊತ್ತು. ಹಲವು ನಗರಗಳಲ್ಲಿ ನೀರಿನ ಬೇಗೆ ಹೆಚ್ಚಾಗಿ ನಾಗರಿಕರು ಪರಸ್ಪರ ಯುದ್ಧಕ್ಕೆ ಸಜ್ಜಾಗುತ್ತಿರುವ ಹೊತ್ತು. ರಾಜಕಾರಣಿಗಳು ಪರಸ್ಪರ ಧಿಕ್ಕಾರ ಕೂಗಿಕೊಂಡು, ಘೋಷಣೆ ಹಾಕಿಕೊಳ್ಳುತ್ತಾ ಬೈದಾಡಿಕೊಳ್ಳುತ್ತಿರುವ ಹೊತ್ತು..ಈ ಹೊತ್ತು ಇಷ್ಟಕ್ಕೇ ಮುಗಿಯುವುದಿಲ್ಲ. ನೀರಿನ ಕೊರತೆಯ ಹಿಡಿತ ದಿನೇದಿನೆ ನಗರಗಳಲ್ಲಿ ಬಿಗಿಯಾಗುತ್ತಿದೆ. ಈಗಾಗಲೇ ಬಹುತೇಕ ನಗರ, ಅರೆನಗರಗಳಲ್ಲಿ ನೀರಿನ...
ಖಂಡಿತಾ ಇದು ನಗರಗಳ ಕುರಿತ ಋಣಾತ್ಮಕ ನೆಲೆಯ ಮಾತಲ್ಲ. ಆದರೂ ಒಮ್ಮೆ ಆಲೋಚಿಸಿ. ನಮ್ಮ ನಗರಗಳಿಗೆ ಏನಾಗಿದೆ? ಏನಾಗುತ್ತಿದೆ? ಯಾಕೆ ಹೀಗಾಗುತ್ತಿದೆ?- ಈ ಮೂರು ಪ್ರಶ್ನೆಗಳನ್ನು ಎದುರಿಟ್ಟುಕೊಂಡು ನಗರವನ್ನು ಶೋಧಿಸುತ್ತಾ ಹೊರಟರೆ ನಮಗೆ ಪರಿಹಾರಗಳು ಸಿಗಬಹುದು. ಉತ್ತರವನ್ನು ಕಂಡುಕೊಂಡು ಅನುಭವಿಸುವ ಖುಷಿಗೆ ತಲುಪಬಹುದು. ಅದು ಸಾಧ್ಯವೇ? ಅದರಲ್ಲೂ ನಮ್ಮನ್ನಾಳುವವರಿಗೆ, ಆಡಳಿತ ಸಂಸ್ಥೆಗಳಿಗೆ ಸಾಧ್ಯವೇ?ಎಂಬುದು ಮತ್ತೂ...
ನದಿ ಬನಾಯಾ ನಾಲಾ, ಕಿಸ್ನೆ ಕಿಯಾ ಗೋಟಾಲ, ಗೋಟಾಲ ಗೋಟಾಲ..ಸಿನಿಮಾ ಉತ್ಸಾಹಿ ನ ನಿತಿನ್ ದಾಸ್ ರೂಪಿಸಿರುವ 2.37 ನಿಮಿಷಗಳ ಹಾಡು 'ಗೋಟಾಲ..ಗೋಟಾಲ..ನದಿ ಬನಾಯಾ ನಾಲಾ' ಪುಣೆಯ ನದಿಗಳ ದುರಂತ ಕಥೆಯನ್ನು ಹೇಳುತ್ತದೆ. ದುರಂತಗಾಥೆಯನ್ನು ಅತ್ಯುತ್ತಮ ಸಂಗೀತ ಹಾಗೂ ಮಾಹಿತಿಯೊಂದಿಗೆ ನಾಗರಿಕರಿಗೆ ಮುಟ್ಟಿಸಲು ಪ್ರಯತ್ನಿಸಿದ್ದಾರೆ ನಿತಿನ್. ಈ ನದಿಯ ಹಾಡನ್ನು ನೋಡಿ ನಮ್ಮ ನದಿಯನ್ನು...
ಇಂದ್ರನ ಅಮರಾವತಿ ಬಗ್ಗೆ ಕೇಳಿದ್ದೆವು. ಇದು ಚಂದ್ರನ ಅಮರಾವತಿ ಬಗ್ಗೆ. ಅಂದರೆ ತೆಲುಗು ದೇಶಂನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಅಮರಾವತಿ. ಆಂಧ್ರ ಪ್ರದೇಶದ ಕನಸಿನ ರಾಜಧಾನಿ. ಅಮರಾವತಿ ಇಂದ್ರನ ರಾಜಧಾನಿಗಿಂತ ಚೆನ್ನಾಗಿ ಆಗಬಹುದೇ? ಇಂಥದೊಂದು ಪ್ರಶ್ನೆ ಉದ್ಭವಿಸಿತ್ತು. ಚಂದ್ರಬಾಬು ನಾಯ್ಡು ಕನಸಿದು. ಮುಖ್ಯಮಂತ್ರಿಯಾಗಿದ್ದಾಗ ನಗರ ನಿರ್ಮಾಣಕ್ಕೆ ಚಾಲನೆ ಕೊಟ್ಟರು. ಆದರೆ ನಂತರದ ಚುನಾವಣೆಯಲ್ಲಿ...
ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಲಪಡಿಸದೇ ನಾವೆಷ್ಟೇ ತಿಪ್ಪರಲಾಗ ಹಾಕಿದರೂ ನಗರೀಕರಣದಲ್ಲಿನ ಅವ್ಯವಸ್ಥೆಯನ್ನು ಸರಿದಾರಿಗೆ ತರಲಾಗದು. ಈ ಅವ್ಯವಸ್ಥೆಯ ನಗರೀಕರಣದಿಂದ ಸೃಷ್ಟಿಯಾಗುವ ಇಬ್ಬರು ರಾಕ್ಷಸರೆಂದರೆ ವಾಹನ ದಟ್ಟಣೆ ಮತ್ತು ತ್ಯಾಜ್ಯ ವಿಲೇವಾರಿ. ಇವರಿಬ್ಬರ ಸಂಹಾರಕ್ಕೆ ಬರೀ ಸರಕಾರದಿಂದಲೋ, ಆಡಳಿತದಿಂದಲೋ ಸಾಧ್ಯವಾಗದು. ಸಾರ್ವಜನಿಕರ ಸಹಕಾರ ಅವಶ್ಯ. ಅಂಥದೊಂದು ಪರಸ್ಪರ ನಂಬಿಕೆಯ ವ್ಯವಸ್ಥೆ ಮೊದಲು ನಿರ್ಮಾಣವಾಗಬೇಕು.
ಇಂದು ನಗರಗಳಲ್ಲಿ ಕಾಡುತ್ತಿರುವುದೇ...
ಬೆಳಕಿಗೆ ಭಾವವಿದೆ ಎಂದಾದರೆ, ಕತ್ತಲೆಗೆ ಜೀವವಿದೆ ಎಂದೆನಿಸುವುದು ನಗರಗಳಲ್ಲಿನ ಕಣ್ಣು ಕೋರೈಸುವ ನಿಯಾನ್ ಬೆಳಕಿನಲ್ಲಿ ಮುಳುಗಿದಾಗ. ಅಡ್ಡರಸ್ತೆಯ ಜಮಾನದಲ್ಲಿ ಕಳೆದು ಹೋಗುವ ಮೊದಲು ಕತ್ತಲೆಯನ್ನು ಪ್ರೀತಿಸುವುದನ್ನು ಕಳೆಯಬೇಕು. ದೂರದೊಂದು ತೀರದಿಂದ ತೇಲಿ ಪಾರಿಜಾತ ಗಂಧಕೆ ಮನಸೋತು ಹೊರಟವರು ವಾಪಸು ಹೊರಡಬೇಕಿದೆ.
*
ನಗರಗಳೆಂದರೆ ಕಣ್ಣು ಕೋರೈಸುವ ಬೆಳಕಿದ್ವಂತೆ. ಕತ್ತಲೆಯಲ್ಲಿ ಬದುಕುವುದು ಕಷ್ಟವೆಂದು ಬೆಳಕಿಗೆ ಬರಬಹುದು. ಅದು ಒಂದು...
ಮಾನವ ಸಂಬಂಧಗಳ ನಿರ್ವಹಣೆಗೂ ತ್ಯಾಜ್ಯ ನಿರ್ಮಾಣ ಅಭ್ಯಾಸಕ್ಕೂ ಒಂದು ಸಂಬಂಧವಿದೆ. ಅದರ ನಾಡಿ ಹಿಡಿದು ನಡೆದರೆ ಬಹುಶಃ ಹೊಟೇಲ್ ಗಳಲ್ಲೇನು, ನಗರಗಳಲ್ಲೂ ತ್ಯಾಜ್ಯ ಸೃಷ್ಟಿಗೆ ಕೊನೆ ಹೇಳಬಹುದೇನೋ?
*
ಉದ್ಯಮಕ್ಕೂ ಉದ್ಯೋಗಕ್ಕೂ ಇರುವ ವ್ಯತ್ಯಾಸ ಬಹಳ ಸೂಕ್ಷ್ಮದ್ದು. ಆದರೆ ತೀರಾ ಗಹನವಾದದ್ದು. ಪಾಶ್ಚಾತ್ಯ ಜಗತ್ತಿನ ಕನ್ಸೂಮರಿಸಂನ್ನು ದೃಷ್ಟಿಯಲ್ಲಿಟ್ಟುಕೊಂಡು ಇದನ್ನು ವಿಶ್ಲೇಷಿಸಿದರೆ ಸಿಗುವ ಅರ್ಥಗಳೇ ಬೇರೆ. ಇದೇ ನೆಲೆ...
ನಮ್ಮೆದುರು ಇರುವ ಮಿಲಿಯನ್ ಡಾಲರ್ ಪ್ರಶ್ನೆಯೆಂದರೆ ಆದಾಯವೆಂದು ತೆರಿಗೆಯನ್ನು ಸ್ವೀಕರಿಸಬೇಕೋ ಅಥವಾ ಅದಕ್ಕೆ ಪ್ರತಿಯಾಗಿ ಜವಾಬ್ದಾರಿ ನಿರ್ವಹಿಸುವ ನೆಲೆಯನ್ನು ಅರ್ಥ ಮಾಡಿಕೊಳ್ಳಬೇಕೋ ಎಂಬುದು. ಇದು ನಮ್ಮ ಸರಕಾರಗಳು, ಸ್ಥಳೀಯ ಸರಕಾರಗಳು ಅರ್ಥ ಮಾಡಿಕೊಳ್ಳಬೇಕಾದದ್ದು. ಇಲ್ಲವಾದರೆ ನಮ್ಮ ಊರುಗಳು ದಿಲ್ಲಿಯಾಗುವುದರಲ್ಲಿ ಸಂಶಯವಿಲ್ಲ.
*
ಜಗತ್ತಿನ ಪ್ರತಿ ಮಹಾನಗರಗಳೂ ಯೋಚಿಸುತ್ತಿರುವುದೂ ಒಂದನ್ನೇ. ನಮ್ಮ ರಸ್ತೆಗಳನ್ನು ವಾಹನಗಳ ಒತ್ತಡದಿಂದ ಹೇಗೆ ಕಾಪಾಡುವುದು?...
ನಗರ ವಿನ್ಯಾಸದ ಕಲ್ಪನೆಯನ್ನು ಸಮಗ್ರವಾಗಿ ನಾವು ಅಂದರೆ ನಾಗರಿಕರು ಮತ್ತು ನಮ್ಮನ್ನಾಳುವವರು ಅರ್ಥ ಮಾಡಿಕೊಳ್ಳದಿದ್ದರೆ ಸುಗ್ರೀವನ ಕಿಷ್ಕಿಂಧೆಯನ್ನು ಮೀರಿಸುವಂಥ ಕಿರುಗಲ್ಲಿಗಳಾಗಿಬಿಡುತ್ತವೆ ನಮ್ಮ ನಗರಗಳು. ಆಗ ನಾವೆಲ್ಲರೂ ಏಕಮುಖೀ ಸಂಚಾರಿಗಳು. ವಾಪಸು ಬರಲು ಮಾರ್ಗಗಳೇ ಇರುವುದಿಲ್ಲ.
*
ನಮ್ಮ ನಗರಗಳು ಸುಂದರವಾಗಿರಬೇಕು ಎಂದು ಬಯಸುವುದು ಸದಾಶಯವೋ, ಅಗತ್ಯವೋ ಎಂಬುದು ಸದಾ ಚರ್ಚೆಗೊಳಪಡಿಸಬೇಕಾದದ್ದೇ. ಸದಾಶಯಗಳೆಲ್ಲಾ ಅಗತ್ಯಗಳಾಗಿರಬೇಕೆಂಬ ಯಾವ ಕಡ್ಡಾಯವೂ ಇಲ್ಲ....
ಮುಂಬಯಿ: ಯಾಕೋ ಈರುಳ್ಳಿ ಬೆಳೆಗಾರರ ಕಷ್ಟ ಬಗೆಹರಿಯುವಂತೆ ಕಾಣುತ್ತಿಲ್ಲ. ಹಾಗಾಗಿ ಸಾಮಾನ್ಯವಾಗಿ ಗ್ರಾಹಕರು ಈರುಳ್ಳಿಯನ್ನುಕತ್ತರಿಸುವಾಗ ಪಡುವ ಸಂಕಟ-ಸಂಕಷ್ಟವನ್ನು ಬೆಳೆಗಾರರು ಅದನ್ನು ಮಾರುವಾಗ ಎದುರಿಸುತ್ತಿದ್ದಾರೆ.
ಪ್ರತಿ ಬಾರಿ ಈರುಳ್ಳಿ...