ಒಂದು ಸಂಶೋಧನೆ ಹೀಗೆ ಹೇಳುತ್ತದೆ.
ಜಾಗತಿಕ ತಾಪಮಾನ, ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ತಗ್ಗಿಸಬೇಕಾದರೆ ಅಥವಾ ಸಮರ್ಥವಾಗಿ ಎದುರಿಸಬೇಕಾದರೆ ಒಂದು ಪರಿಹಾರವಿದೆ. ಅದೆಂದರೆ, ಭತ್ತ ಬೆಳೆಯುವ ಬದಲು ಬೇರೆ ಏನಾದರೂ ಬೆಳೆಯಿರಿ !
ಭತ್ತ ನಮ್ಮ ಆಹಾರ ಬಟ್ಟಲಿನ ಪ್ರಮುಖ ಬೆಳೆ. ವಿಶೇಷವಾಗಿ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಅಕ್ಕಿ ಪ್ರಮುಖವಾದ ಆಹಾರ. ಅದನ್ನೇ ಬಿಟ್ಟು ಬೇರೆ ಏನು ಬೆಳೆಯುವುದು?

ಸಾಂಪ್ರದಾಯಿಕ ಭತ್ತ ಬೆಳೆಯುವ ಕ್ರಮ ಈಗ ರೈತರಿಗೆ ಹೆಚ್ಚೇನೂ ಲಾಭ ತರುವ ಮಾರ್ಗವಾಗಿ ಉಳಿದಿಲ್ಲ. ದಿನೇದಿನೆ ಭತ್ತ ಬೆಳೆಯ ನಿರ್ವಹಣೆ ಹಾಗೂ ಕಟಾವು ಇತ್ಯಾದಿ ಯ ವೆಚ್ಚ ಏರುತ್ತಿದೆ. ಇದರ ಜತೆಗೆ ನಮ್ಮ ಹವಾಮಾನ ವೈಪರೀತ್ಯದ ಹೋರಾಟಕ್ಕೂ ಭತ್ತ ತೊಡಕುಂಟು ಮಾಡುತ್ತಿದೆ ಎನ್ನುತ್ತದೆ ಒಂದು ಅಧ್ಯಯನ. ನೇಚರ್ ಕಮ್ಯುನಿಕೇಷನ್ಸ್ ನಲ್ಲಿ ಪ್ರಕಟವಾಗಿರುವ ಒಂದು ಅಧ್ಯಯನದ ಪ್ರಕಾರ, ಭತ್ತ ಬೆಳೆಯುವ ಬದಲು ಸಿರಿಧಾನ್ಯ, ಕಾಳುಗಳು, ಮೆಕ್ಕೆ ಜೋಳ ಬೆಳೆದರೆ ಸೂಕ್ತವಂತೆ.
ಈರುಳ್ಳಿ ಕಣ್ಣೀರು ತರಿಸಲಿಲ್ಲ; ದರ ಕಣ್ಣೀರು ಬರಿಸಿತು !
ಇದರಿಂದ ರೈತರಿಗೆ ಉತ್ಪಾದನಾ ವೆಚ್ಚವನ್ನಷ್ಟೇ ಕಡಿಮೆ ಮಾಡುವುದಿಲ್ಲ. ಜತೆಗೆ ಆದಾಯವನ್ನೂ ಹೆಚ್ಚಿಸುತ್ತದಂತೆ. ಅಧ್ಯಯನದ ಸಂಗತಿ ವಿವರಿಸುವಂತೆ, ಸುಮಾರು ಶೇ.11 ರಷ್ಟು ಉತ್ಪಾದನಾ ವೆಚ್ಚವನ್ನು ಈ ಪರ್ಯಾಯ ಧಾನ್ಯಗಳು ಕಡಿಮೆ ಮಾಡಬಹುದಂತೆ. ಇದರ ಮೂಲಕ ರೈತರ ಆದಾಯವೂ ಹೆಚ್ಚಾಗಲಿದೆ ಎಂಬುದು ಅಭಿಪ್ರಾಯ.
ಭಾರತದ ರೈತರು ಯಾವಾಗಲೂ ಅಕ್ಕಿಯನ್ನು ಅದರ ಅರ್ಥಿಕ ಮೌಲ್ಯದ ಕಾರಣದಿಂದ ಬೆಳೆಯುತ್ತಾರೆ. ಆದರೆ ಜಾಗತಿಕ ತಾಪಮಾನದ ವೈಪರೀತ್ಯಗಳಿಗೆ ಗುರಿಯಾಗುವ ಪ್ರಮುಖ ಬೆಳೆ ಭತ್ತ. ಆದರೆ ಸಿರಿಧಾನ್ಯಗಳು ಹವಾಮಾನ ವೈಪರೀತ್ಯದ ವಿರುದ್ಧ ಹೋರಾಡುವ ಸಾಮರ್ಥ್ಯವಿರುವ ಬೆಳೆಗಳು. ಅದಕ್ಕಾಗಿ ಅವುಗಳನ್ನು ಬೆಳೆದರೆ ಉತ್ಪಾದನಾ ವೆಚ್ಚವೂ ಕಡಿಮೆ ಹಾಗೂ ಆದಾಯವೂ ಹೆಚ್ಚು ಎನ್ನುತ್ತದೆ ಅಧ್ಯಯನ. ಈ ಅಧ್ಯಯನವನ್ನು ಆಮೆಎರಿಕದ ಡೆಲ್ವೆರ್ ವಿವಿ, ಕೊಲಂಬಿಯಾ ವಿವಿ, ಹೈದರಾಬಾದ್ ನ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ ಮತ್ತಿತರ ಸಂಸ್ಥೆಗಳು ನಡೆಸಿವೆ.
ಪ್ಲಾಸ್ಟಿಕ್ ಏನು ಮಹಾ ಎಂದು ಮೂಗು ಮುರಿಯಬೇಡಿ; ಎಚ್ಚರ ವಹಿಸಿ
ಅಧ್ಯಯನದ ಪ್ರಕಾರ, ʼಭಾರತದಲ್ಲಿ ನಿರಂತರವಾಗಿ ಭತ್ತ ಬೆಳೆಯುವುದನ್ನು ಕಡಿಮೆಗೊಳಿಸಿ, ಸಿರಿಧಾನ್ಯ ಮತ್ತಿತರ ಪರ್ಯಾಯ ಬೆಳೆಗಳನ್ನು ಬೆಳೆದರೆ ಧಾನ್ಯಗಳ ಉತ್ಪಾದನೆಯಲ್ಲಿ ಬಹಳ ದೊಡ್ಡ ಸಾಧನೆ ಮಾಡಬಹುದು. ರೈತರ ವೆಚ್ಚವೂ ಕಡಿಮೆಯಾಗಿ ಆದಾಯ ಉತ್ತಮಗೊಳ್ಳುತ್ತದಂತೆ.
ಆದ ಕಾರಣ ಭತ್ತ ಬೆಳೆಗೆ ಶರಣು ಹೇಳಿ ಪರ್ಯಾಯ ಬೆಳೆಗಳಿಗೆ ಮೊರೆ ಹೋಗಬೇಕೆನ್ನುತ್ತದೆ ಈ ಅಧ್ಯಯನ.