ಮುಂಬಯಿ: ಯಾಕೋ ಈರುಳ್ಳಿ ಬೆಳೆಗಾರರ ಕಷ್ಟ ಬಗೆಹರಿಯುವಂತೆ ಕಾಣುತ್ತಿಲ್ಲ. ಹಾಗಾಗಿ ಸಾಮಾನ್ಯವಾಗಿ ಗ್ರಾಹಕರು ಈರುಳ್ಳಿಯನ್ನುಕತ್ತರಿಸುವಾಗ ಪಡುವ ಸಂಕಟ-ಸಂಕಷ್ಟವನ್ನು ಬೆಳೆಗಾರರು ಅದನ್ನು ಮಾರುವಾಗ ಎದುರಿಸುತ್ತಿದ್ದಾರೆ.
ಪ್ರತಿ ಬಾರಿ ಈರುಳ್ಳಿ ಬೆಳೆ ಕೈಗೆ ಬರುವಷ್ಟರಲ್ಲಿ ಇಲ್ಲವೇ ದರ ಕುಸಿದಿರುತ್ತದೆ, ಇಲ್ಲವೇ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದರೂ ಹವಾಮಾನ, ಮಳೆ ಇತ್ಯಾದಿ ಕಾರಣಗಳಿಂದ ಸಾಕಷ್ಟು ಪ್ರಮಾಣದಲ್ಲಿ ಬೆಳೆದಿರುವುದಿಲ್ಲ. ಇದು ಹಲವು ವರ್ಷಗಳಿಂದ...
ಗುಜರಾತ್ ಮಾಡೆಲ್ ಎಂದು ಪ್ರಚಾರ ಮಾಡುತ್ತಿದ್ದವರು ಇನ್ನೊಮ್ಮೆ ಶರ್ಟ್ ನ ಕಾಲರ್ ನ್ನು ಮೇಲಕ್ಕೆ ಕೊಡವಬಹುದು. ಅದರಂತೆಯೇ ಗುಜರಾತ್ ಏನು ಮಹಾ ಎನ್ನುವವರು ಮತ್ತೊಮ್ಮೆ ಮೂಗು ಮುರಿಯಬಹುದು.
ಇವೆಲ್ಲರ ಮಧ್ಯೆ ವಾಸ್ತವ ಏನೆಂದರೆ ಗುಜರಾತಿನ ಒಂದು ಸಣ್ಣ ಹಳ್ಳಿ ದೊಡ್ಡ ಸುದ್ದಿ ಮಾಡಿದೆ. ಈ ಸುದ್ದಿ ಮಾಡಿರುವುದು ಯಾವುದೋ ನೇತ್ಯಾತ್ಮಕ ಕಾರಣಕ್ಕಲ್ಲ, ಬದಲಾಗಿ ಧನಾತ್ಮಕ ಕಾರಣಕ್ಕೆ.
ಶ್ರೀಮಂತಿಕೆ...
ಪ್ರವಾಸೋದ್ಯಮ ಭವಿಷ್ಯದ ಉದ್ಯಮ, ಉದ್ಯೋಗ ಕ್ಷೇತ್ರ ಎಂದೆಲ್ಲ ಬಿಂಬಿಸಲಾಗುತ್ತಿದೆ. ನಿಜವೂ ಇರಬಹುದು. ಪರಿಸರವನ್ನೂ ಉಳಿಸಿಕೊಂಡು ಹೇಗೆ ಪ್ರವಾಸೋದ್ಯಮವನ್ನು ಬೆಳೆಸಿಕೊಳ್ಳಬಹುದು ಎಂಬುದರ ಬಗ್ಗೆಯೂ ಚರ್ಚೆ ನಡೆದಿದೆ.
ಅವರು ಆ ಊರಿನಲ್ಲಿ ಆ ಗಿಡ ನೆಟ್ಟರು, ಚೆನ್ನಾಗಿದೆ, ಒಳ್ಳೆ ಹೂವುಗಳು ಬಿಟ್ಟಿವೆ. ಹೂವುಗಳು ಸುಂದರವಾಗಿವೆ ಎಂದು ಒಂದು ಕಡ್ಡಿ ತಂದು ನಮ್ಮ ಊರಿನ ಮಣ್ಣಿನಲ್ಲಿ ನೆಟ್ಟರೆ ಬರುತ್ತದೆಯೇ? ಗೊತ್ತಿಲ್ಲ,...
ರೈತರ ಮಕ್ಕಳಿಗೆ ಮದುವೆಯಾಗಲಿಕ್ಕೆ ಹೆಣ್ಣು ಸಿಗುತ್ತಿಲ್ಲ..ಯಾವ ಪೋಷಕರೂ ರೈತರ ಮಗನಿಗೆ ತಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡುವುದಿಲ್ಲವಂತೆ. ಈ ಸಮಸ್ಯೆ ಇನ್ನೂ ಹಲವು ಕ್ಷೇತ್ರದ ಉದ್ಯೋಗಿಗಳಿಗೆ ಎದುರಾಗಿದೆ. ಮುಖ್ಯವಾಗಿ ಸ್ವಯಂ ಉದ್ಯೋಗವೆಂದರೆ ಸ್ವಲ್ಪ ಹಿಂದೆಯೇ. ಬಹುತೇಕರ ಒಲವು ಐಟಿ ಕ್ಷೇತ್ರದವರ ಮೇಲೆ. ಅದರಲ್ಲೂ ಒಂದು ತಮಾಷೆ ಇದೆ. ಮೊದ ಮೊದಲು ಐಟಿ ಕ್ಷೇತ್ರದವರಾಗಿದ್ದರೆ ಪರವಾಗಿಲ್ಲ,...
ಒಂದು ಪಟ್ಟಣದಲ್ಲಿ ಸಣ್ಣದೊಂದು ದಿನಸಿ ಅಂಗಡಿ ಮುಚ್ಚುತ್ತಿದೆ ಎಂದರೆ ಯಾರಿಗೂ ಏನೂ ಅನಿಸದು. ಯಾರೂ ಅದರ ಬಗ್ಗೆ ಎರಡನೆಯದಾಗಿ ಯೋಚಿಸುವುದಿಲ್ಲ. ಅದೇ ಒಂದು ಪಟ್ಟಣಕ್ಕೆ ಒಂದು ಮಾಲ್ ಬರುತ್ತಿದೆ ಎಂದರೆ ಊರಿನಲ್ಲೆಲ್ಲ ಕೇವಲ ಚರ್ಚೆ ಮಾಡುವುದಿಲ್ಲ, ಸಂಭ್ರಮಿಸುವ ಪರಿಯೂ ಇದೆ. ಆದರೆ ತುಸು ಕಷ್ಟ ಎನಿಸಿದರೂ ನಾವು ಮೊದಲು ಚರ್ಚಿಸಬೇಕಾದದ್ದು ದಿನಸಿ ಅಂಗಡಿ ಮುಚ್ಚಲು...
ಭಾರತ ಇರುವುದು ಹಳ್ಳಿಗಳಲ್ಲಿ ಎಂಬ ಮಾತು ಕೊಂಚ ಹಳೆಯದು. ಈಗ ಆ ಹಳ್ಳಿಗಳೇ ನವರೂಪದಲ್ಲಿ ಅರೆಪಟ್ಟಣಗಳಾಗಿ ರೂಪುಗೊಳ್ಳುತ್ತಿವೆ. ಇಂತಹ ಅರೆಪಟ್ಟಣಗಳ ಆರೋಗ್ಯವನ್ನು ಕಾಪಾಡುವುದು ಬಹಳ ಮುಖ್ಯವಾದುದು. ಅದರಲ್ಲೂ ಭಾರತದ ಮಹಾನಗರಗಳ ಆರೋಗ್ಯದಲ್ಲಿ ಏರುಪೇರು ಆಗಬಾರದೆಂದರೆ ಈ ಅರೆ ಪಟ್ಟಣಗಳು, ಹಳ್ಳಿಗಳ ಆರೋಗ್ಯ ಸುಸ್ಥಿರವಾಗಿರಬೇಕು. ಈ ಮಹಾ ಪಯಣದಲ್ಲಿ ಗ್ರಾಮೀಣ ಪತ್ರಕರ್ತರು, ನಾಗರಿಕರು, ವಿದ್ಯಾವಂತ ಉತ್ಸಾಹಿಗಳು,...
ಇಡುಕ್ಕಿ: ಕೇರಳದ ಇಡುಕ್ಕಿ ಜಿಲ್ಲೆ ತಿಳಿದಿರಬಹುದು. ನೆನಪು ಮಾಡಿಕೊಳ್ಳಿ. ನಾಲ್ಕು ವರ್ಷದ ಹಿಂದೆ ಬಿದ್ದ ದಿಢೀರ್ ಮಳೆಗೆ ಊರಿಗೇ ಊರೇ ಕೊಚ್ಚಿ ಹೋಗಿತ್ತು. ಒಮ್ಮೆಲೆ ಶುರುವಾದ ಮಳೆ ಅಬ್ಬರಿಸತೊಡಗಿದಾಗ ಇದೂ ಎಂದಿನ ಮಳೆ ಅಂದುಕೊಂಡಿದ್ದರು. ಆದರೆ ಕೆಲವೇ ಕ್ಷಣಗಳಲ್ಲಿ ಅದು ಸುಳ್ಳೆನಿಸಿ ಸೇತುವೆ, ಮನೆ ಮಾರು ಎಲ್ಲವೂ ಕುಸಿಯತೊಡಗಿದಾಗ ಪ್ರಳಯದ ಅನುಭವವಾಗಿತ್ತು.
ವಿಚಿತ್ರವೆಂದರೆ ಅದೇ ಜಿಲ್ಲೆಯಲ್ಲಿಈ...
ನಗರಗಳಿಗೆ ಜೀವಜಲವಾದ ನದಿಗಳ ಮೂಲವೇ ನೀರಿನ ಕೊರತೆಯನ್ನು ಅನುಭವಿಸಲು ಆರಂಭಿಸದರೆ ಇದಕ್ಕೆ ಏನೆನ್ನಬೇಕು? ನಮ್ಮ ನಗರೀಕರಣದ ಹಪಹಪಿಸುವಿಕೆ ಇದಕ್ಕೆ ಕಾರಣವೆನ್ನಬೇಕೇ ಅಥವಾ ಲಭ್ಯ ನೀರನ್ನು ಸಂಪನ್ಮೂಲವನ್ನಾಗಿ ತಿಳಿಯದೇ ಅಂಧಾದುಂಧಿ ಮಾಡಿದುದರ ಪರಿಣಾಮವೇ? ನಮ್ಮ ನಿರ್ಲಕ್ಷ್ಯವೇ, ಅಸಡ್ಡೆಯೇ? ಎಂದು ವಿಶ್ಲೇಷಿಸಿದ್ದಾರೆ ಶ್ಯಾಮಸುಂದರ್. ಕೊಡಗು ಮರುಗುತ್ತಿದೆ; ಕಾಫಿ ಕರಟುತ್ತಿದೆ ; ಕಾವೇರಿ ಸೊರಗುತ್ತಿದ್ದಾಳೆ !
ಒಂದೇ ಸಾಲಿನಲ್ಲಿ ಸರಳವಾಗಿ...
ಖಂಡಿತಾ ಇದರಲ್ಲಿ ಅನುಮಾನವೇ ಇಲ್ಲ, ಅನುಮಾನ ಪಡುವುದೂ ಬೇಕಿಲ್ಲ. ದಿನೇ ದಿನೆ ನಗರಗಳ ಸ್ಫೋಟವನ್ನು ಗಮನಿಸಿದರೆ ಭಯವಾಗುವುದೂ ಉಂಟು, ಆತಂಕವಾಗುವುದೂ ಉಂಟು. ಕೈಗಾರೀಕರಣದ ಕಲ್ಪನೆಯಲ್ಲಿ ಈ ಕೇಂದ್ರೀಕೃತ ವ್ಯವಸ್ಥೆಯ ನಗರಗಳನ್ನು ಸೃಷ್ಟಿಸಿಕೊಳ್ಳುತ್ತಾ ಹೊರಟೆವು. ಹತ್ತು ಪಟ್ಟಣ ಸೇರಿ ಒಂದು ದೊಡ್ಡ ಪಟ್ಟಣವಾಯಿತು. ಕ್ರಮೇಣ ಅಂಥ ಹತ್ತು ದೊಡ್ಡ ಪಟ್ಟಣ ಸೇರಿ ಒಂದು ನಗರವಾಯಿತು. ಆ...
ನದಿಯನ್ನು ಸ್ವತ್ಛಗೊಳಿಸುವುದೆಂದರೆ ಸಣ್ಣ ಕೆಲಸವೇನಲ್ಲ ಎಂಬುದು ಈಗಾಗಲೇ ಸರಕಾರಗಳಿಗೆ ಗೊತ್ತಾಗಿದೆ. ವಾಸ್ತವ ಹೀಗಿರುವಾಗ ನದಿಯನ್ನು ಮಲಿನಗೊಳಿಸದಿರುವಂತೆ ಜಾಗೃತಿ ಮೂಡಿಸುವುದೇ ಜಾಣವಂತಿಕೆ.
*
ನಮ್ಮ ಹಿರಿಯರು ಹೇಳುತ್ತಿದ್ದ ಮಾತನ್ನು ನೀವೂ ಕೇಳಿರಬಹುದು. ಯಾವುದನ್ನೇ ಆಗಲಿ ಸೃಷ್ಟಿಸುವುದು ಕಷ್ಟ ; ಹಾಳು ಮಾಡುವುದು ಸುಲಭ. ಇನ್ನೂ ಗಾದೆ ಮಾತಿನಲ್ಲಿ ಹೇಳುವಂತೆ ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ. ಒಂದು ಸುಂದರವಾದ ಕಲಾಕೃತಿ...
ಮುಂಬಯಿ: ಯಾಕೋ ಈರುಳ್ಳಿ ಬೆಳೆಗಾರರ ಕಷ್ಟ ಬಗೆಹರಿಯುವಂತೆ ಕಾಣುತ್ತಿಲ್ಲ. ಹಾಗಾಗಿ ಸಾಮಾನ್ಯವಾಗಿ ಗ್ರಾಹಕರು ಈರುಳ್ಳಿಯನ್ನುಕತ್ತರಿಸುವಾಗ ಪಡುವ ಸಂಕಟ-ಸಂಕಷ್ಟವನ್ನು ಬೆಳೆಗಾರರು ಅದನ್ನು ಮಾರುವಾಗ ಎದುರಿಸುತ್ತಿದ್ದಾರೆ.
ಪ್ರತಿ ಬಾರಿ ಈರುಳ್ಳಿ...