ಭಾರತ ಇರುವುದು ಹಳ್ಳಿಗಳಲ್ಲಿ ಎಂಬ ಮಾತು ಕೊಂಚ ಹಳೆಯದು. ಈಗ ಆ ಹಳ್ಳಿಗಳೇ ನವರೂಪದಲ್ಲಿ ಅರೆಪಟ್ಟಣಗಳಾಗಿ ರೂಪುಗೊಳ್ಳುತ್ತಿವೆ. ಇಂತಹ ಅರೆಪಟ್ಟಣಗಳ ಆರೋಗ್ಯವನ್ನು ಕಾಪಾಡುವುದು ಬಹಳ ಮುಖ್ಯವಾದುದು. ಅದರಲ್ಲೂ ಭಾರತದ ಮಹಾನಗರಗಳ ಆರೋಗ್ಯದಲ್ಲಿ ಏರುಪೇರು ಆಗಬಾರದೆಂದರೆ ಈ ಅರೆ ಪಟ್ಟಣಗಳು, ಹಳ್ಳಿಗಳ ಆರೋಗ್ಯ ಸುಸ್ಥಿರವಾಗಿರಬೇಕು. ಈ ಮಹಾ ಪಯಣದಲ್ಲಿ ಗ್ರಾಮೀಣ ಪತ್ರಕರ್ತರು, ನಾಗರಿಕರು, ವಿದ್ಯಾವಂತ ಉತ್ಸಾಹಿಗಳು, ಮಹಿಳೆಯರು, ವಿದ್ಯಾರ್ಥಿಗಳ ಎಲ್ಲರ ತೊಡಗಿಸಿಕೊಳ್ಳುವಿಕೆ, ಯೋಗದಾನ ತೀರಾ ಅಗತ್ಯವಿದೆ. ಎಲ್ಲರೂ ಉತ್ಸಾಹಿ ಪತ್ರಕರ್ತರಂತೆಯೇ ಯೋಚಿಸಬೇಕು. ಪತ್ರಕರ್ತರಂತೆಯೇ ಹಲವು ಪಾತ್ರಗಳನ್ನು ನಿಭಾಯಿಸಬೇಕು. ಆಗ ನಾವಿರುವ ಊರು, ಪಟ್ಟಣ ಸುಸ್ಥಿರವಾಗಿರಲು ಸಾಧ್ಯ. ಪರಿಸರದಿಂದ ಹಿಡಿದು ಸ್ಥಳೀಯ ಆರ್ಥಿಕತೆವರೆಗೂ ಇರುವ ಹತ್ತಾರು ಸವಾಲುಗಳು, ಸಮಸ್ಯೆಗಳಿಗೆ ಸ್ಥಳೀಯ ಮಟ್ಟದಲ್ಲೇ, ತಳ ಮಟ್ಟದಲ್ಲೇ ಪರಿಹಾರ ಹುಡುಕಬೇಕು. ಅದಕ್ಕೆ ಎಲ್ಲರೂ ಪರ್ತಕರ್ತರಾಗಬೇಕು, ಅಭ್ಯದುಯ ವಕ್ತಾರರಾಗಬೇಕು. ಇದೇ ಸಲ್ಯೂಷನ್ ಜರ್ನಲಿಸಂ.
ಇಂಥವರ ಕಾರ್ಯಪಡೆ ಅಗತ್ಯವಾಗಿ ರೂಪುಗೊಳ್ಳಬೇಕು. ಈ ನಿಟ್ಟಿನಲ್ಲಿ ರುರ್ಬನ್ ಇಂಡಿಯಾ ಸಂಸ್ಥೆ ಕಾರ್ಯೋನ್ಮುಖವಾಗಿದೆ. ಬರವಣಿಗೆ-ಮಾಹಿತಿ-ತರಬೇತಿ-ಸಂಶೋಧನೆ-ಪ್ರಕಾಶನ ಎಲ್ಲವೂ ರುರ್ಬನ್ ಇಂಡಿಯಾದ ಧ್ಯೇಯಗಳು. ಈ ದಿಸೆಯಲ್ಲಿ ಆಸಕ್ತರಿಗೆ ಈ ರುರ್ಬನ್ (ಅರೆಪಟ್ಟಣ, ಹಳ್ಳಿಗಳ) ಪತ್ರಿಕೋದ್ಯಮದ ಬಗ್ಗೆ ನಮ್ಮ ಸಂಸ್ಥೆ ಆಸಕ್ತರಿಗೆ ತರಬೇತಿಯಿಂದ ಹಿಡಿದು ಎಲ್ಲ ಬಗೆಯ ಸಹಕಾರವನ್ನು ನೀಡಲಿದೆ. ಇದೇ ಅಭ್ಯುದಯ ಪತ್ರಿಕೋದ್ಯಮ- ಡೆವಲಪ್ ಮೆಂಟ್ ಜರ್ನಲಿಸಂ, ಸಲ್ಯೂಷನ ಜರ್ನಲಿಸಂ. ಬರವಣಿಗೆಯಿಂದ ಹಿಡಿದು ಅಡ್ವೊಕೆಸಿಯವರಿಗೆ ಮಾಹಿತಿ ನೀಡಿ ಆಧುನಿಕ ಸಂದರ್ಭದ ಹಾಗೂ ಆಧುನಿಕ ಅಗತ್ಯಗಳನ್ನು ಪೂರೈಸುವ ಪತ್ರಕರ್ತರ ಪಡೆಯನ್ನು ಸಜ್ಜುಗೊಳಿಸುವುದು ರುರ್ಬನ್ ಇಂಡಿಯಾ ಸಂಸ್ಥೆ ಧ್ಯೇಯ. ಸಂಸ್ಥೆಯೊಂದಿಗೆ ಹತ್ತಾರು ವರ್ಷಗಳ ಅನುಭವ ಹೊಂದಿರುವ ಹಿರಿಯ ಅನುಭವಿ ಪತ್ರಕರ್ತರು, ನೀತಿನಿರೂಪಕರ ತಂಡವೇ ಕೈ ಜೋಡಿಸಿದೆ. ಯಾರಾದರೂ ತರಬೇತಿ ಪಡೆಯಲು ಇಚ್ಛಿಸುವವರು ನಿಮ್ಮ ವಿವರವನ್ನು ಸಂಪರ್ಕ ಸಂಖ್ಯೆಯೊಂದಿಗೆ therurbanindia@gmail.com ಗೆ ಕಳುಹಿಸಿಕೊಡಿ. ನಾವು ಶಿಬಿರಗಳು, ತರಬೇತಿ ಹಮ್ಮಿಕೊಳ್ಳುವಾಗ ನಿಮಗೆ ಮಾಹಿತಿ ನೀಡಲಾಗುವುದು.